ಮೈಸೂರು:ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸ್ನೇಹಿತರಿಬ್ಬರು ನೀರುಪಾಲಾಗಿರುವ ಘಟನೆ, ಟಿ.ನರಸೀಪುರ ತಾಲೂಕಿನ ಯಡದೊರೆ ಗ್ರಾಮದ ಬಳಿ ನಡೆದಿದೆ.
ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸ್ನೇಹಿತರು ಸಾವು - ಯುವಕರು ಈಜಲು ಹೋಗಿ ನೀರು ಪಾಲಾಗಿದ್ದಾ
ಟಿ.ನರಸೀಪುರದಲ್ಲಿ ಹಬ್ಬದ ಹಿನ್ನೆಲೆ ಸ್ನೇಹಿತನ ಮನೆಗೆ ಬಂದಿದ್ದ ಇಬ್ಬರು ವ್ಯಕ್ತಿಗಳು ಈಜಲು ಹೋಗಿ ಸಾವನ್ನಪ್ಪಿದ್ದಾರೆ.
ಯುವಕರು ನೀರುಪಾಲು
ತುಮಕೂರು ಮೂಲದ ವಿನಯ್ (29), ಗಿರೀಶ್ (26) ಮೃತರು. ಇವರು ಹಬ್ಬದ ಹಿನ್ನೆಲೆ ಸ್ನೇಹಿತನ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಈಜಲು ಹೋಗಿದ್ದಾಗ ಕಾವೇರಿ ನದಿಯ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಆಗಮಿಸಿದ ಟಿ.ನರಸೀಪುರ ಪೊಲೀಸರು ಮೃತದೇಹಗಳನ್ನು ಹೊರತೆಗೆದು ತನಿಖೆ ಮುಂದುವರೆಸಿದ್ದಾರೆ.