ಮೈಸೂರು:ಮಂಡ್ಯ ಜಿಲ್ಲೆಯ ಕೊರೊನಾ ಸೋಂಕಿತ ವ್ಯಕ್ತಿಯು ನಂಜನಗೂಡು ತಾಲೂಕಿನ ಹೆಳವರಹುಂಡಿ ಮತ್ತು ಅಂಜಾನಪುರ ಗ್ರಾಮಗಳಿಗೆ ಭೇಟಿ ನೀಡಿದ ಕಾರಣ ಆ ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದೆ.
ನಂಜನಗೂಡು ತಾಲೂಕಿನ ಮತ್ತೆರಡು ಗ್ರಾಮಗಳು ಸೀಲ್ ಡೌನ್! - ನಂಜನಗೂಡು ತಾಲೂಕಿನ ಹೆಳವರಹುಂಡಿ ಮತ್ತು ಅಂಜಾನಪುರ ಗ್ರಾಮ ಸೀಲ್ಡೌನ್
ಕೊರೊನಾ ಸೋಂಕಿತ ವ್ಯಕ್ತಿಯು ಭೇಟಿ ನೀಡಿದ ಕಾರಣ ನಂಜನಗೂಡು ತಾಲೂಕಿನ ಹೆಳವರಹುಂಡಿ ಮತ್ತು ಅಂಜಾನಪುರ ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದೆ. ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕ ಮಾಡಿದ 25 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ನಂಜನಗೂಡು ತಾಲೂಕಿನ ಮತ್ತೆರಡು ಗ್ರಾಮಗಳು ಸೀಲ್ಡೌನ್
ಹೆಳವರಹುಂಡಿ ಗ್ರಾಮದ 19 ಮಂದಿ ಮತ್ತು ಅಂಜಾನಪುರ ಗ್ರಾಮದ 6 ಮಂದಿ ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದು, ಎಲ್ಲಾ 25 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಹಾಗೂ ಗ್ರಾಮದಲ್ಲಿರುವ 395 ಕುಟುಂಬಗಳ ಎಲ್ಲಾ ಸದಸ್ಯರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ಇನ್ನು ಅಂಜಾನಪುರ ಗ್ರಾಮದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯು ಭೇಟಿ ಮಾಡಿದ ಮನೆ ಊರಿನ ಹೊರಗೆ ಇರುವುದರಿಂದ ಆ ಮನೆಯೊಂದನ್ನು ಮಾತ್ರ ಕ್ವಾರಂಟೈನ್ ಮಾಡಲಾಗಿದೆ. ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಗಳ ನೇತೃತ್ವದಲ್ಲಿ ಈ ಎರಡು ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದೆ.
TAGGED:
ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು