ಮೈಸೂರು:ಮಧ್ಯಾಹ್ನದ ಬಿಸಿ ಊಟ ಸೇವನೆ ಮಾಡಿ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥ ಗೊಂಡಿರುವ ಘಟನೆ ಹೆಚ್.ಡಿ ಕೋಟೆಯ ಆದರ್ಶ ಶಾಲೆಯಲ್ಲಿ ನಡೆದಿದೆ.
ಬಿಸಿ ಊಟ ಸೇವನೆ: ಹೆಚ್.ಡಿ ಕೋಟೆ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥ - students ill in Mysor
ಮಧ್ಯಾಹ್ನ ಬಿಸಿ ಊಟ ಸೇವನೆ ಮಾಡಿ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥ ಗೊಂಡಿರುವ ಘಟನೆ ಹೆಚ್.ಡಿ ಕೋಟೆಯ ಆದರ್ಶ ಶಾಲೆಯಲ್ಲಿ ನಡೆದಿದೆ. ಸುಜಾತ ಮತ್ತು ಅಬ್ರಾಹಂ ಅಸ್ವಸ್ಥಗೊಂಡ ವಿದ್ಯಾರ್ಥಿಗಳು.
6ನೇ ತರಗತಿಯ ಸುಜಾತ ಮತ್ತು ಅಬ್ರಾಹಂ ಅಸ್ವಸ್ಥಗೊಂಡ ವಿದ್ಯಾರ್ಥಿಗಳು. ವಿದ್ಯಾರ್ಥಿಗಳಿಗೆ ತಕ್ಷಣ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಈ ವಿದ್ಯಾರ್ಥಿಗಳು ಊಟ ಸೇವಿಸಿದ ತಕ್ಷಣ ವಾಂತಿ ಮಾಡಿಕೊಂಡಿದ್ದು ಇದರಿಂದ ಎಚ್ಚೆತ್ತ ಶಿಕ್ಷಕರು ಬೇರೆ ಮಕ್ಕಳಿಗೆ ಊಟ ಮಾಡದಂತೆ ತಡೆದಿದ್ದಾರೆ.
ಇದರಿಂದ ಹೆಚ್ಚಿನ ಅಪಾಯ ತಪ್ಪಿದ್ದು, ಅಸ್ವಸ್ಥಗೊಂಡ ಇಬ್ಬರು ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಆಸ್ಪತ್ರೆಗೆ ಬಂದು ಮಕ್ಕಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಇನ್ನು ವಿಷಯ ತಿಳಿದ ಪೋಷಕರು ಗಾಬರಿಯಿಂದ ಆಸ್ಪತ್ರೆಗೆ ಧಾವಿಸಿ ತಮ್ಮ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.