ಮೈಸೂರು:ಇಬ್ಬರು ವ್ಯಕ್ತಿಗಳ ನಡುವೆಆಟೋ ಡಿಕ್ಕಿಯ ವಿಚಾರವಾಗಿ ಆರಂಭವಾದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಪ್ರಕರಣ ಕೋಟೆಹುಂಡಿ ಬಳಿ ನಡೆದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಲ್ಲಿ ಆಟೋ ಡಿಕ್ಕಿಯಾಗಿದ್ದಕ್ಕೆ ಉಂಟಾದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯ! - ಮೈಸೂರು ಕ್ರೈಮ್ ಸುದ್ದಿ
ಸಾಂಸ್ಕೃತಿಕ ನಗರಿಯಲ್ಲಿ ನೆತ್ತರು ಹರಿದಿದೆ. ಆಟೋ ಡಿಕ್ಕಿಯಾಗಿದ್ದಕ್ಕೆ ಶುರುವಾದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.
ಮೈಸೂರಿನಲ್ಲಿ ಕೊಲೆ
ಆಟೋ ಚಾಲಕ ಟಿ.ಮಂಜುನಾಥ್ (33) ಹಾಗೂ ಪ್ರಯಾಣಿಕ ಆರ್.ಮಂಜುನಾಥ್ (32) ಎಂಬುವರು ಕೋಟೆಹುಂಡಿ ಕಡೆ ಹೊರಟ ಸಂದರ್ಭದಲ್ಲಿ, ಎದುರು ದಿಕ್ಕಿನಲ್ಲಿ ಯೋಗೇಶ್ ಎಂಬ ವ್ಯಕ್ತಿ ಆಟೋದಲ್ಲಿ ಬಂದ ಪರಿಣಾಮ ಎರಡು ಆಟೋಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದೆ.
ಈ ಸಂದರ್ಭದಲ್ಲಿ ಯೋಗೇಶ್ ಹಾಗೂ ಟಿ.ಮಂಜುನಾಥ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ನಂತರ ಯೋಗೀಶ್ ಚಾಕುವಿನಿಂದ ಆಟೋದಲ್ಲಿದ್ದ ಇಬ್ಬರಿಗೂ ಚುಚ್ಚಿದ್ದಾನೆ. ಪರಿಣಾಮ ಇವರಿಬ್ಬರೂ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಜಯಪುರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.