ಮೈಸೂರು: ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಇಂದು ಸೋಂಕಿನಿಂದ ಮೃತಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಮೈಸೂರಿನಲ್ಲಿ ಕೊರೊನಾಗೆ ಮತ್ತಿಬ್ಬರು ಬಲಿ: 7ಕ್ಕೇರಿದ ಮೃತರ ಸಂಖ್ಯೆ - mysore corona news
ಮೈಸೂರಿನಲ್ಲಿಂದು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಸಾವನ್ನಪ್ಪಿದವರನ್ನ ಆರೋಗ್ಯ ಇಲಾಖೆ ನಿಯಮದ ಪ್ರಕಾರ ಜಿಲ್ಲಾಡಳಿತ ಅಂತ್ಯಕ್ರಿಯೆ ಮಾಡಿದೆ.
ಮೈಸೂರು ಜಿಲ್ಲಾಸ್ಪತ್ರೆ
76 ವರ್ಷದ ವೃದ್ಧ, 46 ವರ್ಷ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತರಿಬ್ಬರು ಮೈಸೂರಿನ ಹುಲ್ಲಿನ ಬೀದಿ ಗಾಡಿ ಚೌಕ ನಿವಾಸಿಗಳಾಗಿದ್ದಾರೆ. ಕೋವಿಡ್-19ನಿಂದ ಮೃತಪಟ್ಟವರನ್ನ ಆರೋಗ್ಯ ಇಲಾಖೆ ನಿಯಮದ ಪ್ರಕಾರ ಜಿಲ್ಲಾಡಳಿತ ಅಂತ್ಯಕ್ರಿಯೆ ಮಾಡಿದೆ.
ಇವರಿಬ್ಬರ ಸಾವಿನ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಸೋಮವಾರ ಸಂಜೆ ಅಧಿಕೃತ ಘೋಷಣೆ ಮಾಡಲಿದೆ.