ಮೈಸೂರು :ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿಯಲ್ಲಿನ ಕೆಲವು ಆತ್ಮಸಾಕ್ಷಿಯ ಮತಗಳು ಕಾಂಗ್ರೆಸ್‌ಗೆ ಬಂದೇ ಬರುತ್ತವೆ. ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಎಷ್ಟು ಮತಗಳು ಬೇಕೋ ಅಷ್ಟು ಆತ್ಮಸಾಕ್ಷಿಯ ಮತಗಳು ಜೆಡಿಎಸ್ ಹಾಗೂ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದೇ ಬರುತ್ತವೆ. ಬಿಜೆಪಿ ಈಗಲೂ ಗೆಲ್ಲಬಾರದು ಎಂಬ ಇಚ್ಛೆ ಜೆಡಿಎಸ್‌ಗೆ ಇದ್ದರೆ ಅವರ ಅಭ್ಯರ್ಥಿಯನ್ನ ಚುನಾವಣಾ ಕಣದಿಂದ ನಿವೃತ್ತಿ ಮಾಡಿಸಲಿ ಎಂದು ಮೈಸೂರಿನಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನಾವು ಅನೇಕ ಬಾರಿ ಜೆಡಿಎಸ್‌ಗೆ ಸಹಾಯ ಮಾಡಿದ್ದೇವೆ. ಅದರಲ್ಲಿ ದೇವೇಗೌಡರನ್ನ ರಾಜ್ಯಸಭೆಗೆ ಕಳಿಸುವಾಗ ನಾವು ಬೆಂಬಲ ನೀಡಿದ್ದೆವು. 37 ಸ್ಥಾನ ಇದ್ದ ಜೆಡಿಎಸ್‌ಗೆ ಸಿಎಂ ಸ್ಥಾನ ಕೊಟ್ಟಿದ್ದೆವು.
ಹೀಗೆ ಹಲವು ಬಾರಿ ನಾವು ಜೆಡಿಎಸ್‌ಗೆ ಸಹಕಾರ ಕೊಟ್ಟಿದ್ದೇವೆ. ಈಗ ಕಾಂಗ್ರೆಸ್ನಿಂದ ಅಲ್ಪಸಂಖ್ಯಾತರೊಬ್ಬರು ಜೆಡಿಎಸ್‌ಗೆ ಸಹಕಾರ ನೀಡಬೇಕು. ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿ ಘೋಷಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಿ ಎಂ ಇಬ್ರಾಹಿಂ ಜೆಡಿಎಸ್ನಲ್ಲಿ ಕ್ಯಾಪ್ಟಿವ್ ಪ್ರೆಸಿಡೆಂಟ್ :ರಾಜ್ಯಸಭಾ ಚುನಾವಣೆಯಲ್ಲಿ ಬಿ ಎಸ್ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಒಳ ಒಪ್ಪಂದ ಮಾಡಿಕೊಂಡಿರೆಂಬ ಆರೋಪ ಮಾಡಿರುವ ಸಿ ಎಂ ಇಬ್ರಾಹಿಂ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಸಿ ಎಂ ಇಬ್ರಾಹಿಂಗೆ ಮಾನ- ಮರ್ಯಾದೆ ಇಲ್ಲ. ಅವನು ಜೆಡಿಎಸ್ನಲ್ಲಿ ಕ್ಯಾಪ್ಟಿವ್ ಪ್ರೆಸಿಡೆಂಟ್ ಇದ್ದಹಾಗೆ.