ಕರ್ನಾಟಕ

karnataka

ETV Bharat / state

ತಿ.ನರಸೀಪುರ ತಾಲೂಕಿನಲ್ಲಿ ಕೊರೊನಾಗೆ ಇಬ್ಬರು ವೃದ್ಧರು ಬಲಿ - ತಿ.ನರಸೀಪುರ ಕೊರೊನಾ ಲೆಟೆಸ್ಟ್ ನ್ಯೂಸ್

ಮೈಸೂರಿನ ತಿ.ನರಸೀಪುರ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಸೋಂಕಿಗೆ ಇಬ್ಬರು ವೃದ್ಧರು ಬಲಿಯಾಗಿದ್ದಾರೆ.

Two old people died by corona at T Narasipura
ತಿ.ನರಸೀಪುರ ತಾಲೂಕಿನಲ್ಲಿ ಕೊರೊನಾಗೆ ಇಬ್ಬರು ವೃದ್ಧರು ಬಲಿ

By

Published : Jul 13, 2020, 12:04 PM IST

ಮೈಸೂರು: ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಿ.ನರಸೀಪುರ ತಾಲೂಕಿನಲ್ಲಿ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.

ತಾಲೂಕಿನ ಗಾಣಿಗನ ಕೊಪ್ಪಲು ಗ್ರಾಮದ 76 ವರ್ಷದ ವ್ಯಕ್ತಿ ಹಾಗೂ ಬನ್ನೂರು ಪಟ್ಟಣದ ಬಿಸ್ಮಿಲ್ಲಾ ನಗರದ 80 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದಾರೆ. ವೃದ್ಧರ ಸಾವಿನ ವರದಿ ಇಂದು ಸಂಜೆ ಬಿಡುಗಡೆಯಾಗುವ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್​​​ನಲ್ಲಿ ಪ್ರಕಟವಾಗಲಿದೆ.

ಬನ್ನೂರು ಪಟ್ಟಣದಲ್ಲೂ ದಿನದಿಂದ ದಿನಕ್ಕೆ ಕೊರೊನಾ‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಲ್ಲಿ ಮೂವರು ಪುರುಷರಿಗೆ ಕೊರೊನಾ ಸೋಂಕು ತಗುಲಿದೆ. ಕೈಯಂಬಳ್ಳಿ ಗ್ರಾಮದ 27 ವರ್ಷದ ಯುವಕ ಹಾಗೂ ಬನ್ನಹಳ್ಳಿ ಹುಂಡಿ ಗ್ರಾಮದ ಮಹಿಳೆಗೆ ಕೊರೊನಾ ದೃಢಪಟ್ಟಿದೆ. ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details