ಕರ್ನಾಟಕ

karnataka

ETV Bharat / state

ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ವೈರಸ್ ಬಗ್ಗೆ ವದಂತಿ ಹಬ್ಬಿಸಿದ ಯುವಕರಿಬ್ಬರು ಅಂದರ್.! - ನಂಜನಗೂಡು ಡಿವೈಎಸ್ಪಿ ಪ್ರಭಾಕರ್ ರಾವ್ ಸಿಂಧೆ

ಕಾಲೇಜು ಹುಡುಗಿಯರಿಬ್ಬರ ಭಾವಚಿತ್ರವನ್ನ ಬಳಸಿಕೊಂಡು ಅವರಿಗೆ ಕೊರೊನಾ ವೈರಸ್ ಇದೆಯೆಂದು ಚೆಲ್ಲಾಟ ಆಡಿರುವ ಯುವಕರಿಗೆ ನಂಜನಗೂಡು ಪೊಲೀಸರು ಜೈಲು ಹಾದಿ ತೋರಿಸಲು ಮುಂದಾಗಿದ್ದಾರೆ.

Coronavirus
ನಂಜನಗೂಡು ಪೊಲೀಸ್​ ಠಾಣೆ

By

Published : Mar 14, 2020, 9:41 AM IST

Updated : Mar 14, 2020, 10:37 AM IST

ನಂಜನಗೂಡು:ಕಾಲೇಜು ಹುಡುಗಿಯರಿಬ್ಬರ ಭಾವಚಿತ್ರವನ್ನ ಬಳಸಿಕೊಂಡು ಕೊರೊನಾ ವೈರಸ್ ಇದೆಯೆಂದು ಸುಳ್ಳು ಮಾಹಿತಿಯನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪಿಗಳನ್ನ ನಂಜನಗೂಡು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು

ನಂಜನಗೂಡು ಪಟ್ಟಣದ ಕಾಲೇಜು ಯುವತಿಯೊಬ್ಬಳಿಗೆ ಕೊರೊನಾ ವೈರಸ್ ಇದೆ ಎಂದು ಗಾಳಿಸುದ್ದಿ ಹಬ್ಬಿಸಲಾಗಿತ್ತು. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಂಜನಗೂಡು ಪಟ್ಟಣದ ಗುರು ಎಂಬಾತನನ್ನ ಮತ್ತು ಚಾಮರಾಜನಗರದಲ್ಲಿ ಓರ್ವ ಹುಡುಗಿಯ ಭಾವಚಿತ್ರವನ್ನ ಬಳಸಿಕೋಂಡಿದ್ದಕ್ಕೆ ಗಗನ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

ನಂಜನಗೂಡು ಡಿವೈಎಸ್ಪಿ ಪ್ರಭಾಕರ್ ರಾವ್ ಸಿಂಧೆ ನೇತೃತ್ವದಲ್ಲಿ ಸೈಬರ್ ಕ್ರೈಮ್ ಪೊಲೀಸರಿಗೆ ಮಾಹಿತಿ ರವಾನಿಸಿ ಕ್ರಮಕೈಗೊಳ್ಳಲು ಮುಂದಾಗಿದ್ದರು. ಮೈಸೂರಿನ ಸೈಬರ್ ಕ್ರೈಂ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕರ ಸ್ಪಷ್ಟ ವಿಳಾಸವನ್ನು ಪಡೆದು ನಂಜನಗೂಡು ಪಟ್ಟಣ ಪೊಲೀಸರು ಯುವಕರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಈ ಕುರಿತಂತೆ ಕಾಲೇಜು ಹುಡುಗಿ ಸ್ಪಷ್ಟನೆ ನೀಡಿದ್ದು, ಕೊರೊನಾ ವೈರಸ್ ಇಲ್ಲವೆಂದು ತಿಳಿಸಿದ್ದಾಳೆ. ನಂಜನಗೂಡು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Last Updated : Mar 14, 2020, 10:37 AM IST

ABOUT THE AUTHOR

...view details