ಕರ್ನಾಟಕ

karnataka

ETV Bharat / state

ಜಿಂಕೆ ಮಾಂಸ ಸಾಗಣೆ: ಮೈಸೂರಿನಲ್ಲಿ ಇಬ್ಬರು ಆರೋಪಿಗಳ ಬಂಧನ - ಜಿಂಕೆ ಮಾಂಸ ಸಾಗಾಟ ಇಬ್ಬರು ಆರೋಪಿಗಳ ಬಂಧನ

ಜಿಂಕೆ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

Two  held for transporting deer meat at Mysore
ಜಿಂಕೆ ಮಾಂಸ ಸಾಗಾಟ: ಮೈಸೂರಿನಲ್ಲಿ ಇಬ್ಬರು ಆರೋಪಿಗಳ ಬಂಧನ

By

Published : Oct 11, 2022, 2:25 PM IST

ಮೈಸೂರು:ಜಿಂಕೆ ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಹೆಚ್.ಡಿ ಕೋಟೆ ತಾಲೂಕಿನ ಬಸಾಪುರದ ಪ್ರಸಾದ್ ಹಾಗೂ ಮುನಿಯಪ್ಪ ಬಂಧಿತ ಆರೋಪಿಗಳು.

ಪರಾರಿಯಾಗಿರುವ ಇತರೆ ಆರೋಪಿಗಳಿಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬೀಸಿದ್ದಾರೆ. ಹೆಚ್​ ​ಡಿ ಕೋಟೆ ತಾಲೂಕಿನ ಎನ್.ಬೇಗೂರು ವನ್ಯಜೀನಿ ವಲಯದ ಕಳಸೂರು ಅರಣ್ಯ ತನಿಖಾ ಠಾಣೆ ಬಳಿ 8 ಕೆ.ಜಿ ಜಿಂಕೆ ಮಾಂಸ ಸಮೇತ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.

ಜಿಂಕೆ ಬೇಟೆಯಾಡಿ, ಮಾಂಸ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂರಕ್ಷಣಾಧಿಕಾರಿ ಡಾ.ರವೀಶ್ ಕುಮಾರ್, ಹೆಡಿಯಾಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸದ್ಯ ಪ್ರಕರಣವನ್ನು ಎನ್.ಬೇಗೂರು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ವಿಶೇಷ ಹುಲಿ ಸಂರಕ್ಷಿತ ದಳ ಪ್ಲಟೂನ್ 02 ಹ್ಯಾಂಡ್ ಪೋಸ್ಟ್​ನ​​ ವಲಯ ಅರಣ್ಯಾಧಿಕಾರಿ ಶಿವನಗೌಡ ಎಸ್ ಗೌಡ, ಮಹೇಶ್ ಸೇರಿದಂತೆ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ:ಬೇಟೆಯಾಡಿದ್ದ ಜಿಂಕೆ ಮಾಂಸ ಒಣಗಿಸಿ ಸಾಗಾಟ: ಓರ್ವನ ಬಂಧನ, ಮತ್ತೋರ್ವ ಪರಾರಿ

ABOUT THE AUTHOR

...view details