ಕರ್ನಾಟಕ

karnataka

ETV Bharat / state

ಟ್ರ್ಯಾಕ್ಟರ್ ನಾಲೆಗೆ ಉರುಳಿ ಬಿದ್ದು ಇಬ್ಬರು ಸಾವು.. ಸಂಬಂಧಿಕರ ಆಕ್ರಂದನ

ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಜಾಬಗೆರೆ ಗ್ರಾಮದಲ್ಲಿ ಟ್ರ್ಯಾಕ್ಟರ್ ಪಲ್ಟಿ ಆಗಿ ಇಬ್ಬರು ಮೃತರಾಗಿದ್ದಾರೆ.

two-dead-after-tractor-overturns-in-mysore
ಟ್ರ್ಯಾಕ್ಟರ್ ನಾಲೆಗೆ ಉರುಳಿ ಬಿದ್ದು ಇಬ್ಬರು ಸಾವು.. ಸಂಬಂಧಿಕರ ಆಕ್ರಂದನ

By

Published : Aug 27, 2022, 9:42 PM IST

ಮೈಸೂರು: ಟ್ರ್ಯಾಕ್ಟರ್ ಪಲ್ಟಿ ಆಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಜಾಬಗೆರೆ ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಗಾವಡಗೆರೆ ಹೋಬಳಿಯ ಜಾಬಗೆರೆ ಗ್ರಾಮದ ಜಲೇಂದ್ರ(40) ಹಾಗೂ ಇವರ ಚಿಕ್ಕಪ್ಪನ ಮಗ ಚೇತನ್ (22) ಮೃತರು.

ಜಲೇಂದ್ರ ಮತ್ತು ಚೇತನ್​ ಅವರು ಸಂಜೆ‌ ಜಮೀನು ಉಳುಮೆ ಮಾಡಲು ತಮ್ಮ ಟ್ರ್ಯಾಕ್ಟರ್​​‌ನಲ್ಲಿ ಹಾರಂಗಿ ನಾಲೆಯ ಏರಿ ಮೇಲೆ ಚಾಲಕನ ಜೊತೆ ತೆರಳುತ್ತಿದ್ದ ವೇಳೆ ಶುಕ್ರವಾರ ರಾತ್ರಿ ಇಡೀ ಸುರಿದ ಮಳೆಗೆ ನಾಲಾ ಏರಿ ರಸ್ತೆ ಕೆಸರುಮಯವಾಗಿ ಜಾರುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಆಕಸ್ಮಿಕವಾಗಿ ನಾಲೆಯೊಳಗೆ ಚಕ್ರ ಇಳಿದು ಟ್ರ್ಯಾಕ್ಟರ್ ಪಲ್ಟಿಯಾಗಿ ಉರುಳಿಬಿದ್ದಿದೆ. ಘಟನೆಯಲ್ಲಿ ಚಾಲಕ ಗಿರೀಶ್ ಎಂಬಾತ ಟ್ರ್ಯಾಕ್ಟರ್‌ನಿಂದ ಹೊರಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದರೆ, ಜಲೇಂದ್ರ ಹಾಗೂ ಚೇತನ್ ಅವರಿಗೆ ಟ್ಯಾಕ್ಟರ್‌ನ ಇಂಜಿನ್ ಮತ್ತು ಸ್ಟೇರಿಂಗ್ ಎದೆ ಮೇಲೆ ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಗ್ರಾಮಸ್ಥರು ಬಂದು ಟ್ರ್ಯಾಕ್ಟರ್ ಮೇಲೆತ್ತಲು ಯತ್ನಿಸಿದ ವೇಳೆ ಡೀಸೆಲ್ ಹೊರಚೆಲ್ಲಿ ಬೆಂಕಿ ಹತ್ತಿಕೊಂಡು ಟ್ರ್ಯಾಕ್ಟರ್ ಬಹುತೇಕ ಸುಟ್ಟು ಹೋಗಿದೆ. ಮೃತ ಜಲೇಂದ್ರ ವಿವಾಹಿತರಾಗಿದ್ದು ಪತ್ನಿ, ಹಾಗೂ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಮತ್ತೊಬ್ಬ ಯುವಕ ಚೇತನ್ ಅವಿವಾಹಿತ ಎಂದು ತಿಳಿದುಬಂದಿದೆ.

ಮುಗಿಲು ಮುಟ್ಟಿದ ಆಕ್ರಂದನ:ಅಪಘಾತದ ಸ್ಥಳದಲ್ಲಿ ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ದುರ್ಘಟನೆಗೆ ಸಂಬಂಧಿಸಿದಂತೆ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕ ಭೇಟಿ:ಈ ವಿಷಯ ತಿಳಿದ ಶಾಸಕ ಎಚ್.ಪಿ. ಮಂಜುನಾಥ್ ಸ್ಥಳಕ್ಕಾಗಮಿಸಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಅಲ್ಲದೆ, ಸರ್ಕಾರದಿಂದ ಸಿಗುವ ಪರಿಹಾರ ಸೌಲಭ್ಯ ಕೊಡಿಸುವುದಾಗಿ ಭರವಸೆ ಇತ್ತರು.

ಇದನ್ನೂ ಓದಿ:ಎಚ್ಚರ: ಐಟಿ ಅಧಿಕಾರಿಗಳ ಹೆಸರಿನಲ್ಲಿ ನಿಮ್ಮ ಮನೆಗೂ ಬರಬಹುದು ಕಳ್ಳರ ಗ್ಯಾಂಗ್​​

ABOUT THE AUTHOR

...view details