ಕರ್ನಾಟಕ

karnataka

ETV Bharat / state

ಆಟವಾಡುವಾಗ ನೀರಿನ ಗುಂಡಿಗೆ ಬಿದ್ದು ಇಬ್ಬರು ಮಕ್ಕಳ ದಾರುಣ ಸಾವು - two children died in periyapatna

ಮನೆಯ ಹಿಂಭಾಗ ವ್ಯವಸಾಯಕ್ಕಾಗಿ ತೆಗೆದಿದ್ದ ಸುಮಾರು ಹತ್ತು ಅಡಿ ನೀರಿನ ಗುಂಡಿಗೆ ಬಿದ್ದು ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ.

ಆಟವಾಡುವಾಗ ನೀರಿನ ಗುಂಡಿಗೆ ಬಿದ್ದು ಇಬ್ಬರು ಮಕ್ಕಳ ಸಾವು
ಆಟವಾಡುವಾಗ ನೀರಿನ ಗುಂಡಿಗೆ ಬಿದ್ದು ಇಬ್ಬರು ಮಕ್ಕಳ ಸಾವು

By

Published : Aug 31, 2021, 8:00 AM IST

ಮೈಸೂರು: ಆಕಸ್ಮಿಕವಾಗಿ ನೀರಿನ ಗುಂಡಿಗೆ ಬಿದ್ದು ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ಪಿರಿಯಾಪಟ್ಟಣ ತಾಲೂಕಿನ ಡಿ.ಜಿ ಕೊಪ್ಪಲು ಗ್ರಾಮದಲ್ಲಿ ಜರುಗಿದೆ.

ಗ್ರಾಮದ ಗೋಪಾಲೇಗೌಡ ರವರ ಮಗಳು ನಿಶು 10), ವೆಂಕಟೇಶ್‌ರವರ ಮಗಳು ಅಕ್ಷಿತಾ (10) ಮೃತರು. ಮನೆಯ ಹಿಂಭಾಗ ವ್ಯವಸಾಯಕ್ಕಾಗಿ ತೆಗೆದಿದ್ದ ಸುಮಾರು ಹತ್ತು ಅಡಿ ನೀರಿನ ಗುಂಡಿಗೆ ಆಟವಾಡುವಾಗ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾರೆ.

ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ABOUT THE AUTHOR

...view details