ಮೈಸೂರು: ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಖದೀಮರನ್ನು ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ - ಮೈಸೂರು ಇಬ್ಬರು ಸರಗಳ್ಳರ ಬಂಧನ
ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರು ಸರಗಳ್ಳರನ್ನು ಬಂಧಿಸಿ, 5 ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡಿದ್ದಾರೆ.
Arrest
ಆರ್.ಎಸ್.ನಾಯ್ಡು ನಗರದ ಸನ್ನಿಡೊನಾಲ್ಡ್ (28) ಹಾಗೂ ಹಿನಕಲ್ ಕಿರಣ್ (22) ಬಂಧಿತರು. ಇವರಿಬ್ಬರು ಆಗಸ್ಟ್ 20ರಂದು ಸೋಮನಾಥ ನಗರದಲ್ಲಿ ಶಾಂತರತ್ನಾ ಎಂಬುವರ ಸರ ಕಿತ್ತು ಪರಾರಿಯಾಗಿದ್ದರು.
ಆರೋಪಿಗಳ ಸೆರೆಗಾಗಿ ವಿಶೇಷ ತಂಡ ರಚನೆ ಮಾಡಿದ್ದ ಪೊಲೀಸರು, ಇದೀಗ ಇಬ್ಬರು ಸರಗಳ್ಳರನ್ನು ಬಂಧಿಸಿದ್ದಾರೆ. ಜೊತೆಗೆ ಇವರಿಂದ 5 ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.