ಮೈಸೂರು:ವರುಣಾ ನಾಲೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗೊರೂರು ಬಳಿ ನಡೆದಿದೆ.
ಈಜಲು ಹೋದ ಇಬ್ಬರು ಬಾಲಕರು ನೀರುಪಾಲು - mysore crime news
ಮೈಸೂರಿನ ಹೊರವಲಯದ ಗೊರೂರು ಬಳಿ ವರುಣಾ ನಾಲೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಹರಿಕೃಷ್ಣನ್ (15), ವೈಭವ್(13) ನೀರು ಪಾಲಾದ ಬಾಲಕರು. ನಗರದ ಹೊರವಲಯದ ಗೊರೂರು ಬಳಿ ವರುಣಾ ನಾಲೆಯಲ್ಲಿ ಈಜಾಡಲೆಂದು ನಾಲ್ವರು ಸ್ನೇಹಿತರೊಂದಿಗೆ ಹೋಗಿದ್ದಾರೆ. ಈ ವೇಳೆ ನೀರಿನ ಸುಳಿಗೆ ಸಿಲುಕಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನಿಬ್ಬರು ಸ್ನೇಹಿತರಾದ ಕುಮಾರ್ ಹಾಗೂ ಧರಣೇಶ್ ಈಜಾಡಲು ಹೆದರಿ ನೀರಿಗಿಳಿಯದೆ ಬಚಾವ್ ಆಗಿದ್ದಾರೆ.
ಈ ಘಟನೆ ಭಾನುವಾರ ಸಂಜೆ ನಡೆದಿದೆ. ಅದೇ ದಿನ ಹರಿಕೃಷ್ಣನ್ ಮೃತದೇಹ ಪತ್ತೆಯಾಗಿದ್ದು, ಸೋಮವಾರ ಬೆಳಿಗ್ಗೆ ವೈಭವ್ ಮೃತದೇಹ ಪತ್ತೆಯಾಗಿದೆ. ಇಂದು ಎರಡು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.