ಮೈಸೂರು: ಗಾಂಜಾ ದಾಸ್ತಾನು ಮಾಡಿಕೊಂಡು ಮಾರಾಟ ಮಾಡಲು ಯತ್ನಿಸಿದ ಇಬ್ಬರನ್ನು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ - Marijuana and drugs latest news
ಅಕ್ರಮವಾಗಿ ಗಾಂಜಾ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಗಾಂಜಾ ವಶಪಡಿಸಿಕೊಂಡಿದ್ದಾರೆ.
ಹುಣಸೂರಿನ ರವಿ ಹಾಗೂ ರಾಜೇಗೌಡ ಬಂಧಿತ ಆರೋಪಿಗಳು. ಕಳೆದ ವಾರ ರವಿ ತನ್ನ ಬೈಕ್ನಲ್ಲಿ ಗಾಂಜಾ ಸೊಪ್ಪನ್ನು ಬೇರೆ ಕಡೆ ಮಾರಾಟಕ್ಕಾಗಿ ಸಾಗಿಸುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ರವಿಯಿಂದ 300 ಗ್ರಾಂ ಗಾಂಜಾ ಹಾಗೂ ಬೈಕ್ ವಶಕ್ಕೆ ಪಡೆದಿದ್ದರು. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಇನ್ನೊಬ್ಬ ಆರೋಪಿ ರಾಜೇಗೌಡನ ಬಳಿಯೂ ಗಾಂಜಾ ಇದೆ ಎಂಬ ಮಾಹಿತಿ ನೀಡಿದ್ದು, ರಾಜೇಗೌಡನ ಮನೆ ಮೇಲೆ ದಾಳಿ ನಡೆಸಿ 1900 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.