ಮೈಸೂರು: ಹುಲಿ ಚರ್ಮವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅರಣ್ಯ ಇಲಾಖೆಯ ಸಂಚಾರಿ ದಳ ಬಂಧಿಸಿದ್ದು, ಬಂಧಿತರಿಂದ ಒಂದು ಕಾರು ಹಾಗೂ ಹುಲಿ ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ. ಮಾಹಿತಿ ಮೇರೆಗೆ ಡಿಸಿಎಫ್ ಎ.ಟಿ ಪೂವಯ್ಯ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿತ್ತು.
ಅಕ್ರಮವಾಗಿ ಹುಲಿ ಚರ್ಮ ಸಾಗಿಸುತ್ತಿದ್ದ ಇಬ್ಬರ ಬಂಧನ - tiger census
ಅರಮನೆ ನಗರಿಯ ಕೆಆರ್ಎಸ್ ಸುತ್ತಲಿನ ಪ್ರದೇಶದಲ್ಲಿ ಹುಲಿ ಚರ್ಮ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಇವರಿಂದ ಹುಲಿ ಚರ್ಮ ಸೇರಿ ಕಾರನ್ನು ಅರಣ್ಯ ಇಲಾಖೆಯ ಸಂಚಾರಿ ದಳ ವಶಕ್ಕೆ ಪಡೆದಿದೆ.
ಅಕ್ರಮವಾಗಿ ಹುಲಿ ಚರ್ಮ ಸಾಗಿಸುತ್ತಿದ್ದ ಇಬ್ಬರ ಬಂಧನ
ಬಂಧಿತರಾದ ಆಕಾಶ್ ರಾವ್ ಮತ್ತು ವಿಷ್ಣು ಎಂಬುವವರನ್ನು ಹುಲಿ ಚರ್ಮದ ಸಮೇತ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಬಳಿ ಬಂಧಿಸಲಾಗಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.