ಮೈಸೂರು:ಆಂಧ್ರಪ್ರದೇಶದಿಂದ ಜಿಂಕೆ ಚರ್ಮವನ್ನು ತಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಮೈಸೂರು ಅರಣ್ಯ ಸಂಚಾರಿ ದಳ ಬಂಧಿಸಿದೆ.
ನಗರದ ಕ್ರಾಫರ್ಡ್ ಹಾಲ್ ವೃತ್ತದಿಂದ ಕುಕ್ಕರಹಳ್ಳಿ ಕೆರೆಗೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಒಂದು ಸಂಖ್ಯೆ ಜಿಂಕೆ ಜಾತಿ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪರಮನೇರ್ ತಾಲೂಕಿನ ಶಿಕಾರಿ ಕಾಲೋನಿ ದಂಡುಮಿಟ್ಟದ ಕುಟ್ಟಿಯಪ್ಪ, ವಿಜಯಕಾಂತ್ ಹಾಗೂ ಕಮಲ್ ಹಾಸನ್ ಬಂಧಿತ ಆರೋಪಿಗಳಾಗಿದ್ದು, ಇವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪರಮನೇರ್ ತಾಲೂಕಿನ ಶಿಕಾರಿ ಕಾಲೋನಿ ದಂಡುಮಿಟ್ಟದ ನಿವಾಸಿಗಳಾಗಿದ್ದಾರೆ. ಈ ಗ್ಯಾಂಗ್ ನಗರದ ಕ್ರಾಫರ್ಡ್ ಹಾಲ್ ವೃತ್ತದಿಂದ ಕುಕ್ಕರಹಳ್ಳಿ ಕೆರೆಗೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಜಿಂಕೆ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ,ಪೊಲೀಸರು ಪರಿಶೀಲನೆ ನಡೆಸಿ ಬಂಧಿಸಿದ್ದಾರೆ.
ಈ ಆರೋಪಿಗಳು ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ಕಾಡಿನಲ್ಲಿ ಬೇಟೆಯಾಡಿ ಜಿಂಕೆ ಚರ್ಮವನ್ನು ತಂದಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸ್ವತ್ತಿನ ಮೂಲ ಪತ್ತೆಗಾಗಿ ತನಿಖಾ ತಂಡವನ್ನು ರಚಿಸಲಾಗಿದೆ.
ಇದನ್ನೂ ಓದಿ: ಹುಕ್ಕೇರಿಯಲ್ಲಿ ಬ್ಲ್ಯಾಕ್ ಫಂಗಸ್ಗೆ ಪತ್ನಿ ಬಲಿ.. ಮನನೊಂದ ವ್ಯಕ್ತಿ ನಾಲ್ವರು ಮಕ್ಕಳೊಂದಿಗೆ ಆತ್ಮಹತ್ಯೆ