ಮೈಸೂರು: ಭಾರತೀಯ ರೈಲ್ವೆಯ ಮೈಸೂರು ವಿಭಾಗವು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 28% ಕ್ಕಿಂತ ಹೆಚ್ಚು ಸರಕು ಸಾಗಣೆಯ ಅಸಾಧಾರಣ ಬೆಳವಣಿಗೆಯನ್ನು ಸಾಧಿಸುವ ಮೂಲಕ ದೇಶದಲ್ಲೇ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
ಮೈಸೂರು ರೈಲ್ವೆ ವಿಭಾಗವೂ ಸರಕು ಸಾಗಣೆಯಲ್ಲೇ ಭಾರತೀಯ ರೈಲ್ವೆಯಲ್ಲಿ ಎರಡನೇ ಸ್ಥಾನ ಪಡೆದಿದ್ದು, ರೈಲ್ವೆ ಖಾತೆ ರಾಜ್ಯ ಸಚಿವ ದರ್ಶನಾ ಜರ್ದೋಶ್ ಅವರು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಅವರಿಗೆ ಸೆ.19ರಂದು ನವದೆಹಲಿಯಲ್ಲಿ ರೈಲ್ವೆ ಮಂಡಳಿಯಿಂದ ಪ್ರಶಸ್ತಿ ನೀಡಿದರು.
ಪ್ರಸಕ್ತ ವರ್ಷದ ಆಗಸ್ಟ್ ವರೆಗಿನ ಸರಕು ಸಾಗಣೆಯಲ್ಲಿ ಹಲವಾರು ಮಹತ್ವದ ಮುಖ್ಯಾಂಶಗಳು ಇಂತಿವೆ.. ಮೈಸೂರು ವಿಭಾಗವು 2023 ರ ಜನವರಿ ಮಾಸದ 1.074 ದಶಲಕ್ಷ ಟನ್ಗಳ ಸಾಗಣೆಯ ಹಿಂದಿನ ದಾಖಲೆಯನ್ನು ಮೀರಿಸಿ, 1.119 ದಶಲಕ್ಷ ಟನ್ಗಳಷ್ಟು ಮಾಸಿಕ ಲೋಡಿಂಗ್ ಸಾಧಿಸಿದೆ.
- ವಿಭಾಗವು 230 ರೇಕಗಳೊಂದಿಗೆ 0.927 ದಶಲಕ್ಷ ಟನ್ದ ಅತ್ಯಧಿಕ ಮಾಸಿಕ ಕಬ್ಬಿಣದ ಅದಿರು ಲೋಡಿಂಗ್ ಅನ್ನು ಸಾಧಿಸಿ ಮಾರ್ಚ್ 2023 ರಲ್ಲಿ 198 ರೇಕ್ಗಳೊಂದಿಗಿನ 0.803 ದಶಲಕ್ಷ ಟನ್ದ ಹಿಂದಿನ ದಾಖಲೆಯನ್ನು ಸರಿಗಟ್ಟಿದೆ- ವಿಭಾಗವು ಆಗಸ್ಟ್ 14, 2023 ರಂದು 12 ರೇಕ್ಗಳೊಂದಿಗೆ ಒಂದೇ ದಿನದಲ್ಲಿ ಅತ್ಯಧಿಕ ಸಂಖ್ಯೆಯ ಕಬ್ಬಿಣದ ಅದಿರು ರೇಕ್ಗಳ ಲೋಡಿಂಗ್ ನ ಹೊಸ ದಾಖಲೆಯನ್ನು ಸ್ಥಾಪಿಸಿದೆ.
- ವಿಭಾಗವು ಆಗಸ್ಟ್ 14 2023 ರಂದು 848 ವ್ಯಾಗನ್ಗಳೊಂದಿಗೆ ಒಂದೇ ದಿನದಲ್ಲಿ ಅತಿ ಹೆಚ್ಚು ವ್ಯಾಗನ್ಗಳನ್ನು ಲೋಡ್ ಮಾಡಿರುವ ಹೊಸ ದಾಖಲೆಯನ್ನು ಸ್ಥಾಪಿಸಿದೆ.
ಆಗಸ್ಟ್ 2023ರಲ್ಲಿ ವಿಭಾಗದಿಂದ ಹೊರಡುವ ಸಾಗಣೆಯ ಲೋಡಿಂಗ್ ಸಾಧನೆ 309.5 ರೇಕ್ಗಳೊಂದಿಗೆ 1.119 ದಶಲಕ್ಷ ಟನ್ ಲೋಡ್ ಆಗಿದೆ ಮತ್ತು ಆಗಸ್ಟ್ 2022ಕ್ಕೆ ಹೋಲಿಸಿದರೆ ಶೇಕಡ 65.5 ಹೆಚ್ಚಳದ ಬೆಳವಣಿಗೆಯನ್ನು ಹೊಂದಿದೆ. ಈ ಸಾಧನೆಯು ಮಾಸಿಕವಾಗಿ ನಿಗದಿಯಾದ 0.820 ದಶಲಕ್ಷ ಟನ್ಗಳ ಗುರಿಯನ್ನು ಸಾಧಿಸಿ ಶೇಕಡ 36.5% ರಿಂದ ಮೀರಿಸಿದೆ.