ಕರ್ನಾಟಕ

karnataka

ETV Bharat / state

ಬಾಳೆ ಗೊನೆಯೊಂದಿಗೆ ಬೀಟೆ ಮರದ ನಾಟಾ ಸಾಗಣೆ: ಆರೋಪಿಯ ಬಂಧನ - Mysore

ಬಾಳೆ ಗೊನೆ ಸಾಗಿಸುವ ವಾಹನದಲ್ಲಿ ಬೀಟೆ ಮರದ ನಾಟಾಗಳನ್ನು ಬಚ್ಚಿಟ್ಟು ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆಯ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಕಲಾಂ ಅಜಾದ್ ಬಂಧಿತ ಆರೋಪಿ.

Transit of beta tree
ಬಾಳೆಗೊನೆಯೊಂದಿಗೆ ಬೀಟೆ ಮರದ ನಾಟಾ ಸಾಗಣೆ: ಆರೋಪಿಯ ಬಂಧನ

By

Published : Aug 15, 2020, 1:51 PM IST

ಮೈಸೂರು:ಬಾಳೆ ಗೊನೆ ಸಾಗಿಸುವ ವಾಹನದಲ್ಲಿ ಬೀಟೆ ಮರದ ನಾಟಾಗಳನ್ನು ಬಚ್ಚಿಟ್ಟು ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆಯ ಪೊಲೀಸರು ಬಂಧಿಸಿರುವ ಘಟನೆ ಆನೆಚೌಕೂರಿನಲ್ಲಿ ನಡೆದಿದೆ.

ಬಾಳೆ ಗೊನೆಯೊಂದಿಗೆ ಬೀಟೆ ಮರದ ನಾಟಾ ಸಾಗಣೆ

ಅಬ್ದುಲ್ ಕಲಾಂ ಅಜಾದ್ ಬಂಧಿತ ಆರೋಪಿ. ಈತ ಕೊಡಗು ಜಿಲ್ಲೆಯ ವಿರಾಜಪೇಟೆಯವನ್ನಾಗಿದ್ದು, ಬಾಳೆ ಗೊನೆ ಸಾಗಿಸುವ ಕ್ಯಾಂಟರ್​​ನಲ್ಲಿ ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿದ್ದ. ಗುರುವಾರ ಮಧ್ಯರಾತ್ರಿ ಗೋಣಿಕೊಪ್ಪ ಕಡೆಯಿಂದ ಹುಣಸೂರು ಕಡೆಗೆ ಬರುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ತಡೆದು ಚೆಕ್ ಮಾಡಿದಾಗ ಬಾನೆ ಗೊನೆ ಕೆಳಗೆ 16 ಬೀಟೆ ನಾಟಗಳು ಪತ್ತೆಯಾಗಿವೆ. ವಾಹವನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆಯ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details