ಮೈಸೂರು: ದಿವಂಗತ ಡಾ.ವಿಷ್ಣುವರ್ಧನ್ ಅವರ ಪತ್ನಿ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಮಂಗಳಮುಖಿಯಿಂದ 1 ರೂಪಾಯಿ ಪಡೆದು ಅಚ್ಚರಿ ಮೂಡಿಸಿದರು.
ಮೈಸೂರು-ಹೆಚ್.ಡಿ. ಕೋಟೆ ರಸ್ತೆಯಲ್ಲಿರುವ ಹಾಲಾಳು ಗ್ರಾಮದಲ್ಲಿ ಪತಿ ಡಾ.ವಿಷ್ಣುವರ್ಧನ್ ಅವರ ಪುಣ್ಯ ಸ್ಮರಣೆ ಅಂಗವಾಗಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ವಾಪಸ್ ಬರುತ್ತಿದ್ದಾಗ ಭಾರತಿ ವಿಷ್ಣುವರ್ಧನ್ ಅವರಿಗೆ ಎದುರಾದ ಮಂಗಳಮುಖಿ ತನಗೊಂದು ಸೀರೆ ಕೊಡುವಂತೆ ಕೇಳಿಕೊಂಡರು. ಈಗ ಎಲ್ಲಿಂದ ತಂದು ಕೊಡಲಿ ಎಂದು ಭಾರತಿ ವಿಷ್ಣುವರ್ಧನ್ ಪ್ರತಿಕ್ರಿಯೆ ನೀಡಿದರು.
ಮಂಗಳಮುಖಿಯಿಂದ 1 ರೂಪಾಯಿ ಪಡೆದ ಭಾರತಿ ವಿಷ್ಣುವರ್ಧನ್! ಹೋಗಲಿ ದುಡ್ಡನ್ನಾದರು ಕೊಡಿ ಎಂದು ಮಂಗಳಮುಖಿ ದುಂಬಾಲು ಬಿದ್ದಾಗ ಭಾರತಿ ಅವರು 200 ರೂಪಾಯಿ ಹಾಗೂ ಅವರ ಸಂಬಂಧಿಕರು 100 ರೂ.ಸೇರಿಸಿ ಒಟ್ಟು 300 ರೂಪಾಯಿ ಕೊಟ್ಟರು. ಇದರಿಂದ ಮಂಗಳಮುಖಿ ಮುಖದಲ್ಲಿ ಮಂದಹಾಸ ಮೂಡಿತು. ಆಗ ತಮಗೆ 1ರೂಪಾಯಿ ನೀಡುವಂತೆ ಭಾರತಿ ವಿಷ್ಣುವರ್ಧನ್ ಅವರು ಕೇಳಿಕೊಂಡಾಗ, ಮಂಗಳಮುಖಿ ಖುಷಿಯಿಂದಲೇ 1 ರೂ.ಕೊಟ್ಟರು.
ನೀವು 300 ರೂಪಾಯಿ ಕೊಟ್ಟಿರುವಾಗ ನಾವ್ 1 ರೂಪಾಯಿ ಕೊಡದಿರೋಕ್ಕೆ ಆಗುತ್ತಾ ಎಂದ್ರು. ಇದಕ್ಕೆ ಪ್ರತಿಕ್ರಿಯಿಸಿದ ಭಾರತಿ ಅವ್ರು ನಾವ್ ಕೊಟ್ಟಿರೊ 300 ರೂಪಾಯಿಗಿಂತ ನೀವು ನೀಡಿರುವ ಒಂದು ರೂಪಾಯಿ ಬೆಲೆನೇ ಜಾಸ್ತಿ ಅಂತಾ ಹೇಳಿದ್ರು.