ಮೈಸೂರು: ಕೊರೊನಾ ಕರ್ಫ್ಯೂ ಹಿನ್ನೆಲೆ, ದಿನಸಿ, ತರಕಾರಿ, ಹಾಲು ಸೇರಿದಂತೆ ಅಗತ್ಯ ಸಾಮಾಗ್ರಿಗಳ ಅಂಗಡಿಗಳನ್ನು ಹೊರತುಪಡಿಸಿ, ಇತರೆ ಅಂಗಡಿಗಳನ್ನು ಮುಚ್ಚಿಸಲು ರಾಜ್ಯ ಸರ್ಕಾರ ಸೂಚನೆ ಕೊಟ್ಟಿರುವುದರಿಂದ ಮಂಗಳಮುಖಿಯರು, ಪ್ರಧಾನಿ ಮೋದಿ ಹಾಗೂ ಸಿಎಂ ಬಿಎಸ್ವೈ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಇಂದು ರಾತ್ರಿ 9 ರಿಂದ ಮೇ 12ರವರೆಗೆ ಕೊರೊನಾ ಕರ್ಫ್ಯೂ ಘೋಷಣೆ ಮಾಡಿರುವುದರಿಂದ, ದೇವರಾಜ ಅರಸು ರಸ್ತೆ, ಶಿವರಾಂ ಪೇಟೆ, ಅಶೋಕ ರಸ್ತೆ ಸೇರಿದಂತೆ ವಾಣಿಜ್ಯ ಕೇಂದ್ರಗಳಲ್ಲಿರುವ ಬಟ್ಟೆ, ಜ್ಯುವೆಲ್ಲರ್ ಶಾಪ್, ಶೂ ಸೇರಿದಂತೆ ಇತರೆ ಅಂಗಡಿಗಳ ಬಾಗಿಲು ಮುಚ್ಚಿವೆ.