ಕರ್ನಾಟಕ

karnataka

ETV Bharat / state

ಮತ್ತೆ ನಂಬರ್​ ಒನ್ ಸ್ಥಾನಕ್ಕೆ ಬರ್ತೇವಿ... ಮೈಸೂರಿನಲ್ಲಿ ಹುಲಿ ಅರಿವು ಕಾರ್ಯಕ್ರಮ!

ಇಂದು ವಿಶ್ವ ಹುಲಿ ದಿನ , ಇದರ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಎರಡು ಹುಲಿಗಳ ಅಂತರದಿಂದ ಕರ್ನಾಟಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಸಂದರ್ಭದಲ್ಲಿ ಹುಲಿಗಳ ಸಂರಕ್ಷಣೆಯ ಕುರಿತ ಅರಿವಿನ ಆಂದೋಲನದ ಅಗತ್ಯವು ಅಷ್ಟೇ ಇದೆ. ಇಂತಹ ಕಾರ್ಯಕ್ರಮವನ್ನು ಮೈಸೂರು ಮೃಗಾಲಯದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.

ಮೈಸೂರು ಮೃಗಾಲಯದಲ್ಲಿ ಪ್ರವಾಸಿಗರಿಗೆ ಹುಲಿಯ ಅರಿವು ಕಾರ್ಯಕ್ರಮ

By

Published : Jul 29, 2019, 2:22 PM IST

ಮೈಸೂರು: ಇಂದು‌ ವಿಶ್ವ ಹುಲಿ ದಿನದ ಹಿನ್ನೆಲೆಯಲ್ಲಿ ಮೈಸೂರಿನ ಮೃಗಾಲಯದ ಒಳಗೆ ಇರುವ ಹುಲಿ ಮನೆಯ ಹತ್ತಿರ ವಿಶ್ವ ಹುಲಿ ದಿನಾಚರಣೆಯ ಬ್ಯಾನರ್ ಹಾಕಿ ಪ್ರವಾಸಿಗರಿಗೆ ಹುಲಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಯಿಂದ ತಿಳಿಸಿ ಕೊಡಲಾಯಿತು.

ಮೈಸೂರು ಮೃಗಾಲಯದಲ್ಲಿ ಪ್ರವಾಸಿಗರಿಗೆ ಹುಲಿಯ ಅರಿವು ಕಾರ್ಯಕ್ರಮ

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಈ ಟಿವಿ ಭಾರತ್ ಜೊತೆ ಮಾತನಾಡಿ, ಹುಲಿಗಳ ಬಗ್ಗೆ ನಮ್ಮ ಜನರಲ್ಲಿ ತಪ್ಪು ಭಾವನೆ ಇದೆ. ಹುಲಿಗಳಲ್ಲಿ ಬಿಳಿ ಹುಲಿ ಎಂಬ ಜಾತಿ ಇಲ್ಲ, ಇತರ ಪ್ರಾಣಿಗಳಲ್ಲಿ ಕಂಡು ಬರುವ ವಂಶಧಾತುವಿನ ಬದಲಾವಣೆಗಳಿಂದ ಈ ರೀತಿ ಹುಲಿಗಳು ಜನನವಾಗುತ್ತವೆ. ಆದರೆ, ವಿಶ್ವ ಹುಲಿ ದಿನದಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಎರಡು ಹುಲಿಗಳ ಅಂತರದಿಂದ ಕರ್ನಾಟಕ ಎರಡನೇ ಸ್ಥಾನಕ್ಕೆ ಜಾರಿದೆ.

ಆದರೆ, ಭೌಗೋಳಿಕವಾಗಿ ನೋಡಿದಾಗ ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯವಾಗಿದೆ. ಆದ್ದರಿಂದ ಮುಂದಿನ ವರ್ಷ ನಾವೇ ಮೊದಲ ಸ್ಥಾನ ಪಡೆಯುತ್ತೇವೆ ಎಂದು ಸಂಪನ್ಮೂಲ ವ್ಯಕ್ತಿ ಗುರುಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details