ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕೆಲ ದಿನಗಳಿಂದ ಸುರಿದ ಮಳೆಗೆ ಹಚ್ಚ ಹಸಿರಿನಿಂದ ನಳನಳಿಸುತ್ತಿದ್ದು, ಪ್ರಕೃತಿ ಸೌಂದರ್ಯ ಆಸ್ವಾದಿಸಲು ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ.
ಕಳೆಗುಂದಿದ ಸೌಂದರ್ಯ ಮರುಕಳಿಸಿತು.. ಪ್ರವಾಸಿಗರಿಗೆ ಬೆರಗು ಮೂಡಿಸುತ್ತಿದೆ ಬಂಡೀಪುರ ಅಭಯಾರಣ್ಯ!
ಬಂಡೀಪುರದಲ್ಲಿ ಜೀವ ಕಳೆ ತುಂಬುತ್ತಿರುವುದರಿಂದ ಪ್ರವಾಸಿಗರು ಪ್ರಕೃತಿ ಸೌಂದರ್ಯ ತನ್ನತ ಸೆಳೆಯುತ್ತಿದೆ. ಇದರಿಂದ ನಿತ್ಯವೂ ಸಫಾರಿ ಹೊರಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಕಿಡಿಗೇಡಿಗಳ ಕೃತ್ಯದಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನದ 10ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿ, ತನ್ನ ನೈಜ ಸೌಂದರ್ಯ ಕಳೆದುಕೊಂಡು ಪರಿಸರ ಪ್ರೇಮಿಗಳ ಮುಖವೂ ಬಾಡುವಂತೆ ಮಾಡಿತ್ತು. ಆದರೆ, ಕೆಲ ದಿನಗಳಿಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಂಡೀಪುರ ಮತ್ತೆ ತನ್ನ ನೈಜ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಇದರಿಂದ ಪ್ರಾಣಿಗಳಿಗೆ ಹಚ್ಚ ಹಸಿರಿನ ಚಪ್ಪರ ವಿಸ್ತಾರವಾಗುತ್ತಾ ತಣ್ಣನೆಯ ವಾತಾವರಣ ನಿರ್ಮಾಣವಾಗುತ್ತಿದೆ.
ಬಂಡೀಪುರದಲ್ಲಿ ಜೀವ ಕಳೆ ತುಂಬುತ್ತಿರುವುದರಿಂದ ಪ್ರವಾಸಿಗರನ್ನ ಈ ಪ್ರಕೃತಿ ಸೌಂದರ್ಯ ತನ್ನತ ಸೆಳೆಯುತ್ತಿದೆ. ಇದರಿಂದ ದಿನವೂ ಸಫಾರಿ ಹೊರಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. 'ಈಟಿವಿ ಭಾರತ್'ನೊಂದಿಗೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ಮಾತನಾಡಿ, ಬಂಡೀಪುರ ಸೌಂದರ್ಯ ಮರಳುತ್ತಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕಾಡಿಗೆ ಮತ್ತೆ ಜೀವ ಕೊಡಲು ಸಿಬ್ಬಂದಿ ಬಳಸಿಕೊಂಡು ಬೀಜಬಿತ್ತನೆ ಮಾಡಲಾಗುತ್ತಿದೆ. ಬೀಜಬಿತ್ತನೆಗೆ ಬೇರೆಯವರನ್ನು ನೇಮಿಸಿಕೊಳ್ಳುವುದಿಲ್ಲ ಎಂದರು.