ಕರ್ನಾಟಕ

karnataka

ETV Bharat / state

ಮೈಸೂರು: ನಾಳೆಯಿಂದಲೇ 'ಡಬಲ್ ಡೆಕ್ಕರ್' ಬಸ್ ಸಂಚಾರ ಪ್ರಾರಂಭ - tomarrow onwards Double Decker 'Bus Travel started in mysore

ಲಂಡನ್ ಮಾದರಿಯಲ್ಲಿ ತಯಾರಾದ ನಿಗಮದ ಪ್ರತಿಷ್ಠಿತ ಡಬಲ್ ಡೆಕ್ಕರ್ ಬಸ್​ಗಳ ಒಂದು ದಿನದ ಪ್ರವಾಸಕ್ಕೆ 250 ರೂ. ನಿಗದಿಪಡಿಸಲಾಗಿದೆ.

tomarrow-onwards-double-decker-bus-travel-started-at-mysore
ನಾಳೆಯಿಂದ ಮೈಸೂರಿನ 'ಡಬಲ್ ಡೆಕ್ಕರ್' ಬಸ್ ಸಂಚಾರ ಪ್ರಾರಂಭ

By

Published : Mar 1, 2021, 8:34 PM IST

ಮೈಸೂರು:ಲಂಡನ್ ಮಾದರಿಯಲ್ಲಿ ತಯಾರಾದ ನಿಗಮದ ಪ್ರತಿಷ್ಠಿತ ಡಬಲ್ ಡೆಕ್ಕರ್ ಬಸ್​ಗಳಿಗೆ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ನಾಳೆ (ಮಾ.2) ಸಂಜೆ 5.30ಕ್ಕೆ ಹೋಟೆಲ್ ರ್ಯಾಡಿಸನ್ ಬ್ಲೂನಲ್ಲಿ ಚಾಲನೆ ನೀಡಲಿದ್ದಾರೆ.

'ಡಬಲ್ ಡೆಕ್ಕರ್' ಬಸ್

ವಿಶ್ವವಿಖ್ಯಾತ ಹಂಪಿ ಮತ್ತು ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಪ್ರವಾಸಿಗರಿಗೆ ಲಂಡನ್ ಬಿಗ್‍ಬಸ್ ಮಾದರಿಯ 6 ಡಬಲ್ ಡೆಕ್ಕರ್ ತೆರೆದ ಬಸ್‍ಗಳನ್ನು ಕೆಎಸ್​ಟಿಡಿಸಿ ವತಿಯಿಂದ ಕಾರ್ಯಾಚರಣೆಗೊಳಿಸಲು ಈಗಾಗಲೇ 5ಕೋಟಿ ರೂ‌ ಅನುದಾನವನ್ನು ಆಯವ್ಯಯದಲ್ಲಿ ಹಂಚಿಕೆ ಮಾಡಲಾಗಿದೆ.

'ಡಬಲ್ ಡೆಕ್ಕರ್' ಬಸ್

ಸರ್ಕಾರದ ಆಶಯದಂತೆ ಲಂಡನ್ ಬಿಗ್‍ಬಸ್ ಮಾದರಿಯ ಡಬಲ್ ಡೆಕ್ಕರ್ ಬಸ್‍ಗಳನ್ನು ಕಾರ್ಯಾಚರಣೆಗೊಳಿಸಲು ನಿಗಮವು ನುರಿತ ಸಂಸ್ಥೆಗಳಿಂದ ಹೊರ ಮೈ ವಿನ್ಯಾಸಗೊಳಿಸಿ ಸಜ್ಜುಗೊಳಿಸಿದ್ದು, ಪ್ರವಾಸ ವೀಕ್ಷಣೆಗೆ ತಯಾರು ಮಾಡಿದೆ.

'ಡಬಲ್ ಡೆಕ್ಕರ್' ಬಸ್

ಓದಿ:ಎಸ್​ಎಸ್​ಎಲ್​ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಪ್ರಸ್ತಾಪಿಸಿದ ಮಾರ್ಗಗಳಾದ ಹೋಟೆಲ್ ಮಯೂರ ಹೊಯ್ಸಳ, ಜಿಲ್ಲಾಧಿಕಾರಿಗಳ ಕಚೇರಿ, ಕ್ರಾಫರ್ಡ್ ಹಾಲ್, ಕುಕ್ಕರಹಳ್ಳಿ ಕೆರೆ, ಮೈಸೂರು ವಿಶ್ವವಿದ್ಯಾಲಯ, ಜಾನಪದ ಮ್ಯೂಸಿಯಂ, ರಾಮಸ್ವಾಮಿ ಸರ್ಕಲ್, ಅರಮನೆ ಕರಿಕುಲ್ಲು ತೊಟ್ಟಿ, ಅರಮನೆ (ದಕ್ಷಿಣ ದ್ವಾರ)-ಜಯಮಾರ್ತಾಂಡ, ಮೃಗಾಲಯ, ಕಾರಂಜಿ ಕೆರೆ, ಸಂಗೊಳ್ಳಿ ರಾಯಣ್ಣ ವೃತ್ತ, ಸ್ನೋ ಸಿಟಿ, ಚಾಮುಂಡಿ ವಿಹಾರ್ ಸ್ಟೇಡಿಯಂ, ಸೆಂಟ್ ಫಿಲೋಮಿನ ಚರ್ಚ್, ಬನ್ನಿಮಂಟಪ, ರೈಲ್ವೆ ಸ್ಟೇಷನ್, ಹೋಟೆಲ್ ಮಯೂರ ಹೊಯ್ಸಳ ಮಾರ್ಗದಲ್ಲಿ ಪ್ರತಿ ಅರ್ಧ ಗಂಟೆಗೆ ಒಂದರಂತೆ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ.

ABOUT THE AUTHOR

...view details