ಮೈಸೂರು: ವರ್ಷಾಂತ್ಯದ ಅಮಾವಾಸ್ಯೆ ಎಫೆಕ್ಟ್ನಿಂದಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ದಳಪತಿಗಳು ಪ್ರಚಾರಕ್ಕೆ ಬ್ರೇಕ್ ಕೊಟ್ಟಿದ್ದಾರೆ.
ಅಮಾವಾಸ್ಯೆ ಎಫೆಕ್ಟ್... ಮಂಡ್ಯದಲ್ಲಿ ದಳಪತಿಗಳ ಪ್ರಚಾರಕ್ಕೆ ಬ್ರೇಕ್ - ಮಂಡ್ಯ ಲೋಕಸಭಾ ಕ್ಷೇತ್ರ
ಇಂದು ವರ್ಷಾಂತ್ಯದ ಅಮಾವಾಸ್ಯೆ ಇರುವುದರಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ರೀತಿಯ ಚುನಾವಣಾ ಪ್ರಚಾರಕ್ಕೆ ಬ್ರೇಕ್ ನೀಡಲಾಗಿದೆ.
![ಅಮಾವಾಸ್ಯೆ ಎಫೆಕ್ಟ್... ಮಂಡ್ಯದಲ್ಲಿ ದಳಪತಿಗಳ ಪ್ರಚಾರಕ್ಕೆ ಬ್ರೇಕ್](https://etvbharatimages.akamaized.net/etvbharat/images/768-512-2909155-thumbnail-3x2-mys.jpg)
ಮಂಡ್ಯ ಲೋಕಸಭಾ ಕ್ಷೇತ್ರ
ಮಂಡ್ಯ ಲೋಕಸಭಾ ಕ್ಷೇತ್ರ
ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ದಳಪತಿಗಳು ಪ್ರಚಾರಕ್ಕೆ ಆಗಮಿಸಬೇಕಾಗಿತ್ತು. ಆದರೆ ವರ್ಷಾಂತ್ಯದ ಕೊನೆ ಅಮಾವಾಸ್ಯೆಯಾಗಿರುವುದರಿಂದ ಪ್ರಚಾರಕ್ಕೆ ಬ್ರೇಕ್ ಹಾಕಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕೂಡ ಪ್ರಚಾರಕ್ಕೆ ಆಗಮಿಸುತ್ತಿಲ್ಲ. ಯುಗಾದಿ ಹಬ್ಬ ಮುಗಿದ ನಂತರ ಚುನಾವಣೆ ಮತ್ತಷ್ಟು ರಂಗೇರಲಿದೆ. ಇನ್ನು ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ನಟರಾದ ಯಶ್ ಹಾಗೂ ದರ್ಶನ್ ಕೂಡಾ ಇಂದು ಪ್ರಚಾರ ನಡೆಸುತ್ತಿಲ್ಲ ಎನ್ನಲಾಗಿದೆ.