ಕರ್ನಾಟಕ

karnataka

ETV Bharat / state

ಇಂದಿಗೂ ನಿನಾದಿಸುತ್ತಿದೆ ಅಂದು ಕಟ್ಟಿದ್ದ ಗಂಧದಗುಡಿ ಘಂಟೆ - KN_MYS_script_KA10003

46 ವರ್ಷಗಳ ಹಿಂದೆ ಗಂಧದಗುಡಿ ಸಿನೆಮಾ ಯಶಸ್ವಿಗಾಗಿ ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್‌ ಮತ್ತು ಕಲಾವಿದರು ಕಟ್ಟಿದ ಘಂಟೆ ಇಂದಿಗೂ ಕಾಡಿನ ಅಧಿದೇವತೆ ಮಾಸ್ತಮ್ಮ ಗುಡಿ ಮುಂದೆ ನಿನಾದಿಸುತ್ತಿದೆ.

ಕಾಡಿನ ಅಧಿದೇವತೆ ಮಾಸ್ತಮ್ಮ ಗುಡಿ

By

Published : Jul 21, 2019, 7:01 PM IST

ಮೈಸೂರು:1973ರಲ್ಲಿ ತೆರೆಕಂಡ 'ಗಂಧದಗುಡಿ' ಸಿನೆಮಾ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಸಾಕಷ್ಟು ಸವಾಲುಗಳನ್ನು ಎದುರಿಸಿತು.ಆನೆ, ಹುಲಿ, ಚಿರತೆ ಹೀಗೆ ಹಲವು ಕಾಡು ಪ್ರಾಣಿಗಳನ್ನು ಕಣ್ಣ ಮುಂದೆ ಕಂಡರು ಧೈರ್ಯದಿಂದ ಸಿನೆಮಾವನ್ನು ಚಿತ್ರೀಕರಿಸಲಾಯಿತು.

ಗಂಧದಗುಡಿ ಘಂಟೆ ಕುರಿತು ದೇವಸ್ಥಾನದ ಅರ್ಚಕ ಮಾದಪ್ಪ ಮಾತನಾಡಿದರು

ರಾಜ್ ಕುಮಾರ್, ವಿಷ್ಣುವರ್ಧನ್, ಕಲ್ಪನಾ, ಎಂ.ಪಿ.ಶಂಕರ್, ನರಸಿಂಹರಾಜು, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ಹೀಗೆ ಅನೇಕ ದೊಡ್ಡ ಕಲಾವಿದರ ತಂಡವೇ ಚಿತ್ರಕರಣದಲ್ಲಿತ್ತು. 'ಗಂಧದಗುಡಿ‌' ಚಿತ್ರೀಕರಣ ಪೂರ್ಣಗೊಂಡ ನಂತರ ಕಾಡಿನ ಅಧಿದೇವತೆ ಮಾಸ್ತಮ್ಮಳ ಗುಡಿಗೆ ಬಂದ ರಾಜ್‌ಕುಮಾರ್, ವಿಷ್ಣುವರ್ಧನ್ ಹಾಗೂ ಕಲಾವಿದರು, ದೇವಸ್ಥಾನದ ಮುಂಭಾಗ ಘಂಟೆಗಳನ್ನು ಕಟ್ಟಿ ಸಿನೆಮಾ ಯಶಸ್ವಿಯಾಗುವಂತೆ ಬೇಡಿಕೊಂಡು ತೆರಳಿದರು. ಅದರಂತೆ ಸಿನೆಮಾ ಯಶಸ್ವಿಯಾದ ನಂತರ ಮಾಸ್ತಮ್ಮ ಗುಡಿಗೆ ಬಂದು ಪೂಜೆ ಕೂಡ ಸಲ್ಲಿಸಿದರು.

46 ವರ್ಷಗಳ ಹಿಂದೆ ಕಟ್ಟಿದ ಘಂಟೆಗಳನ್ನು ನೋಡಲು ಇಲ್ಲಿಗೆ ಬರುವ ಪ್ರವಾಸಿಗರು ಗಂಧದಗುಡಿ ಸಿನೆಮಾವನ್ನು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ದೇವಸ್ಥಾನದ ಅರ್ಚಕರಾದ ಮಾದಪ್ಪ ಅವರು 'ಈ ಟಿವಿ ಭಾರತ್'ಗೆ ಈ ಬಗ್ಗೆ ನೀಡಿದ ಮಾಹಿತಿ ಇಲ್ಲಿದೆ.

For All Latest Updates

ABOUT THE AUTHOR

...view details