ಕರ್ನಾಟಕ

karnataka

ETV Bharat / state

ಹೈಟೆಕ್​ ವೇಶ್ಯಾವಾಟಿಕೆ ದಂಧೆ: ಮೈಸೂರಿನಲ್ಲಿ ಟಿಕ್​ ಟಾಕ್​ ಸುಂದರಿ ಅಂದರ್​! - tik tok acter arrest in mysore for alligation of Prostitution

ಹಿಂದೊಮ್ಮೆ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದಿದ್ದರೂ ಪುನಃ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ್ದಕ್ಕಾಗಿ ಮೈಸೂರಿನಲ್ಲಿ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.

tik-tok-acter-arrest-in-mysore-for-alligation-of-prostitution
ಮೈಸೂರಿನಲ್ಲಿ ಟಿಕ್​ ಟಾಕ್​ ಸುಂದರಿ ಅಂದರ್​!

By

Published : Mar 12, 2021, 8:07 PM IST

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಕಿಂಗ್ ಪಿನ್ ಮಹಿಳೆ ಸೇರಿದಂತೆ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಈ ಹಿಂದೆಯೂ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದಿದ್ದ ಸುಮಾ ಎಂಬಾಕೆ ಆ ವೇಳೆ ನನ್ನನ್ನು ಬಲವಂತದಿಂದ ಜಾಲಕ್ಕೆ ತಳ್ಳಿದ್ದಾರೆ ಎಂದು ಹೇಳಿದ್ದರಿಂದ ಆಕೆಯನ್ನು ರಕ್ಷಿಸಲ್ಪಟ್ಟ ಮಹಿಳೆ ಎಂದು ಪೊಲೀಸರು ಘೋಷಿಸಿದ್ದರು.

ಇದಾದ ಮೇಲೂ ಪೊಲೀಸರ ಕಣ್ಣಿಗೆ ಮಣ್ಣೆರಚಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿ ಸುಮಾಳನ್ನು ಇದೀಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಓದಿ:ಕೋವ್ಯಾಕ್ಸಿನ್​​​ ಲಸಿಕೆ ಪಡೆದ ಸಚಿವ ಸುಧಾಕರ್​​

ಟಿಕ್​ ಟಾಕ್​ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯಳಾಗಿದ್ದ ಆಕೆ, ಈ ಮೂಲಕವೇ ಯುವಕರನ್ನು ತನ್ನ ದಂಧೆಗೆ ಸೆಳೆಯುತ್ತಿದ್ದಳು ಎನ್ನಲಾಗಿದೆ. ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದಿರುವ ಸುಮಾ(32) ಹಾಗೂ ಈಕೆಯ ದಂಧೆಗೆ ಸಾಥ್ ನೀಡುತ್ತಿದ್ದ ಸಿದ್ದರಾಜು(37) ವಿರುದ್ಧ ಮೇಟಗಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details