ಮೈಸೂರು: ಚಳಿಗಾಲದಲ್ಲಿ ಕಾಡು ಪ್ರಾಣಿಗಳು ಅಷ್ಟಾಗಿ ಕಾಡಿನಿಂದ ಹೊರ ಬರುವುದಿಲ್ಲ. ಆದ್ರೆ, ಅಪರೂಪವೆಂಬಂತೆ ಹುಲಿಗಳು ಹಿಂಡಾಗಿ ಬಂದು ಕಾಡಿನ ಸನಿಹದಲ್ಲಿ ನೀರು ಕುಡಿದಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.
ನಾಗರಹೊಳೆಯಲ್ಲಿ ಕಾಣಿಸಿಕೊಂಡ ಹುಲಿ ಹಿಂಡು: ಪ್ರವಾಸಿಗರು ಫುಲ್ ಖುಷ್ - Tiger in the Dammanakatte Safari Zone
ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯದಲ್ಲಿ ಹುಲಿಗಳು ಕಾಣಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಡಿನ ಸನಿಹದಲ್ಲಿರುವ ಕೆರೆಯಲ್ಲಿ ಹುಲಿಗಳು ನೀರು ಕುಡಿಯುತ್ತಿರುವ ವಿಡಿಯೋ ಇದಾಗಿದೆ.
![ನಾಗರಹೊಳೆಯಲ್ಲಿ ಕಾಣಿಸಿಕೊಂಡ ಹುಲಿ ಹಿಂಡು: ಪ್ರವಾಸಿಗರು ಫುಲ್ ಖುಷ್](https://etvbharatimages.akamaized.net/etvbharat/prod-images/768-512-5018595-thumbnail-3x2-nin.jpg)
ನಾಗರಹೊಳೆಯಲ್ಲಿ ಕಾಣಿಸಿಕೊಂಡ ಹುಲಿ ಹಿಂಡು
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ದಮ್ಮನಕಟ್ಟೆ ಸಫಾರಿ ವಲಯದಲ್ಲಿ ನಾಲ್ಕೈದು ಹುಲಿಗಳು ಕಾಣಿಸಿಕೊಂಡಿವೆ. ಕೆರೆಯಲ್ಲಿ ಹುಲಿಗಳು ನೀರು ಕುಡಿಯುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಾಗರಹೊಳೆಯಲ್ಲಿ ಕಾಣಿಸಿಕೊಂಡ ಹುಲಿ ಹಿಂಡು
ಇನ್ನು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಕಂಡು ಪ್ರಾಣಿಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ವಿಡಿಯೋ ಯಾವಾಗ ಸೆರೆ ಹಿಡಿದಿದ್ದು ಎಂಬುದರ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.