ಮೈಸೂರು:ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಸಫಾರಿ ವಾಹನಕ್ಕೆ ಹುಲಿಯೊಂದು ಹೆದರದೇ ಆರಾಮಾಗಿ ಹೊಂಡದ ಬಳಿ ಓಡಾಡುತ್ತಿರುವ ದೃಶ್ಯ ಕಂಡು ಸಫಾರಿಗೆ ಹೋದ ಜನರು ಸಂತಸಗೊಂಡಿದ್ದಾರೆ.
ಪ್ರಪಂಚದಲ್ಲೇ ಅತಿಹೆಚ್ಚು ಹುಲಿ ಸಾಂದ್ರತೆ ಹೊಂದಿರುವ ಪ್ರದೇಶ ಎಂಬ ಖ್ಯಾತಿ ಪಡೆದಿರುವ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಈ ಹುಲಿಗಳನ್ನು ನೋಡಲು ದೇಶದ ನಾನಾ ಕಡೆಯಿಂದ ಜನರು ಬರುತ್ತಾರೆ. ಅದರಂತೆ ಪ್ರತಿಯೊಬ್ಬರಿಗೂ ಸಫಾರಿಯಲ್ಲಿ ಹುಲಿಯ ದರ್ಶನ ಆಗುತ್ತಿರುವುದು ಸಾಮಾನ್ಯವಾಗಿದೆ.