ಮೈಸೂರು:ಆಹಾರಕ್ಕಾಗಿ ಅರಣ್ಯದಲ್ಲಿ ಅಲೆಯುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ ಮಾಡಿದೆ. ಆಶ್ಚರ್ಯಕರ ರೀತಿಯಲ್ಲಿ ಹುಲಿ ದಾಳಿಯಿಂದ ಆದಿವಾಸಿ ಪಾರಾಗಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಗೋಳೂರು ಹಾಡಿಯಲ್ಲಿ ನಡೆದಿದೆ.
ಮೈಸೂರಿನಲ್ಲಿ ಆಹಾರಕ್ಕಾಗಿ ಅರಣ್ಯದಲ್ಲಿ ಅಲೆಯುತ್ತಿದ್ದ ಆದಿವಾಸಿ ಮೇಲೆ ಹುಲಿ ದಾಳಿ - Tiger attack in Mysore
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ.ಕುಪ್ಪೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಆದಿವಾಸಿ ವ್ಯಕ್ತಿ ಮೇಲೆ ಹುಲಿ ದಾಳಿ ಮಾಡಿದೆ. ವ್ಯಕ್ತಿಯ ಎದೆ ಭಾಗ ಮತ್ತು ತೊಡೆಗೆ ಗಾಯವಾಗಿದೆ.
ಆದಿವಾಸಿ ಮೇಲೆ ಹುಲಿ ದಾಳಿ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ.ಕುಪ್ಪೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಗೋಳೂರು ಹಾಡಿಯ ನಿವಾಸಿ ರಾಜು (56) ಹುಲಿ ದಾಳಿಗೆ ಒಳಗಾದ ವ್ಯಕ್ತಿ. ಹುಲಿ ದಾಳಿಯಿಂದ ಎದೆ ಭಾಗ ಮತ್ತು ತೊಡೆಗೆ ಗಾಯವಾಗಿದೆ.
ಜೀವನೋಪಾಯಕ್ಕಾಗಿ ಅರಣ್ಯದಲ್ಲಿ ಗೆಡ್ಡೆ-ಗೆಣಸು ಸಂಗ್ರಹಿಸಲು ಹೋಗಿದ್ದಾಗ ಘಟನೆ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಗಾಯಾಳುವನ್ನು ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.