ಮೈಸೂರು:ಹೊಸ ವರ್ಷಾಚಾರಣೆ ಹಿನ್ನೆಲೆಯಲ್ಲಿ ನಾಗರಹೊಳೆ ಅಭಯಾರಣ್ಯಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಟಿಕೆಟ್ ಸೋಲ್ಡ್ ಔಟ್ ಆಗಿರುವುದರಿಂದ ಕೆಲ ಸಫಾರಿಗರು ನಿರಾಸೆ ಅನುಭವಿಸಿ, ಸಫಾರಿ ಕೇಂದ್ರದ ಸಿಬ್ಬಂದಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿರುವ ಹೆಚ್.ಡಿ. ಕೋಟೆ ತಾಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ ಆಫ್ಲೈನ್ ಮೂಲಕ ಟಿಕೆಟ್ ಪಡೆಯಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ, ಸಫಾರಿಗೆ ಆಗಮಿಸಿದ್ದ ಹಲವು ಪ್ರವಾಸಿಗರಿಗೆ ಟಿಕೆಟ್ ಸಿಗದೆ ನಿರಾಸೆ ಉಂಟಾಯಿತು. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಪ್ರವಾಸಿಗರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಟಿಕೆಟ್ ಫುಲ್ ಆಗಿದೆ ಎಂದು ಸಮಜಾಯಿಷಿ ನೀಡಿದ ಸಿಬ್ಬಂದಿ ವಿರುದ್ಧ ಪ್ರವಾಸಿಗರು ಕಿಡಿಕಾರಿದರು. ಅದಕ್ಕೆ ಉತ್ತರಿಸಿದ ಇಲಾಖೆ ಸಿಬ್ಬಂದಿ, ''ಟಿಕೆಟ್ ಸೋಲ್ಡ್ ಔಟ್ ಆಗಿರುವುದನ್ನು ನೀವೇ ತಿಳಿದುಬೇಕು'' ಎಂದು ಹೇಳಿದ್ದಾರೆ.