ಕರ್ನಾಟಕ

karnataka

ETV Bharat / state

ಮೃತ ವೃದ್ಧೆಯ ಹೆಬ್ಬೆಟ್ಟಿನ ಗುರುತು ಪಡೆದ ಪ್ರಕರಣ : ಆರೋಪಿತನ ವಿರುದ್ಧ ಎಫ್​​ಐಆರ್ ದಾಖಲು - ಮೃತ ವೃದ್ಧೆಯ ಹೆಬ್ಬೆಟ್ಟಿನ ಗುರುತು ಪಡೆದ ಪ್ರಕರಣ

ಹೆಬ್ಬೆಟ್ಟಿನ ಗುರುತು ಪಡೆಯುವುದನ್ನು ಮೃತಳ ಸಂಬಂಧಿಯಾಗಿರುವ ಕಾವ್ಯ ಎಂಬುವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು..

Thumb impression taken by dead body case
ಮೃತ ವೃದ್ಧೆಯ ಹೆಬ್ಬೆಟ್ಟಿನ ಗುರುತು ಪಡೆದ ಪ್ರಕರಣ

By

Published : Nov 28, 2021, 9:08 PM IST

ಮೈಸೂರು : ಖಾಲಿ ಪತ್ರಗಳಿಗೆ ಮೃತ ವೃದ್ಧೆಯ ಹೆಬ್ಬೆಟ್ಟಿನ ಸಹಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​​​ಐಆರ್ ದಾಖಲಾಗಿದೆ. ಹೆಬ್ಬೆಟ್ಟು ಪಡೆಯುತ್ತಿರುವ ದೃಶ್ಯ ಚಿತ್ರೀಕರಿಸಿದ ಕಾವ್ಯ ಎಂಬುವರು ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಹೆಬ್ಬೆಟ್ಟು ಪಡೆದಿದ್ದ ಸುರೇಶ್ ಎಂಬಾತನ ವಿರುದ್ಧ ಎಫ್​​​ಐಆರ್ ದಾಖಲಾಗಿದೆ.

ಶ್ರೀರಾಂಪುರ ನಿವಾಸಿ ಜಯಮ್ಮ ಎಂಬುವರು ನ.16ರಂದು ಮೃತಪಟ್ಟಿದ್ದರು. ಅವರ ಅಂತಿಮ ದರ್ಶನ ಪಡೆಯಲು ಸಂಬಂಧಿಕರಾದ ಕಾವ್ಯ ತೆರಳಿದ್ದರು. ಈ ವೇಳೆ ಮೃತ ಜಯಮ್ಮರ ಅಕ್ಕನ ಮಗ ಸುರೇಶ್​​​ ಖಾಲಿ ಭದ್ರತಾ ಪತ್ರಗಳಿಗೆ ಮೃತಳ ಹೆಬ್ಬೆಟ್ಟಿನ ಗುರುತು ಒತ್ತಿಸಿಕೊಳ್ಳುತ್ತಿದ್ದರು.

ಈ ಬಗ್ಗೆ ಪ್ರಶ್ನೆ ಮಾಡಿದಾಗ ನಿನಗೆ ಏಕೆ ಸುಮ್ಮನಿರು ಎಂದು ಸುರೇಶ್ ಆವಾಜ್ ಹಾಕಿ ಬಾಯಿ ಮುಚ್ಚಿಸಿದ್ದರು. ಅದೇ ವೇಳೆ ಕಾವ್ಯ ಮೃತಳ ಹೆಬ್ಬೆಟ್ಟಿನ ಗುರುತು ಪಡೆಯುವುದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಇಂದು ಪೊಲೀಸ್​​ ಠಾಣೆಗೆ ಹಾಜರಾಗಿ ಸುರೇಶ್​​​ ವಿರುದ್ಧ ಕಲಂ 420, 467, 511 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: Viral Video: ಆಸ್ತಿ ಮೇಲಿನ ವ್ಯಾಮೋಹ.. ಮೈಸೂರಲ್ಲಿ ಖಾಲಿ ಪತ್ರಕ್ಕೆ ಹೆಣದ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಕರು!

For All Latest Updates

TAGGED:

ABOUT THE AUTHOR

...view details