ಮೈಸೂರು:ಬೈಕ್ ಹಾಗೂ ಸ್ಕಾರ್ಪಿಯೋ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಅಡುಗೆ ಕೆಲಸಕ್ಕೆ ತೆರಳುತ್ತಿದ್ದ ಒಂದೇ ಗ್ರಾಮದ ಮೂವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ನಡೆದಿದೆ.
ಬೈಕ್-ಸ್ಕಾರ್ಪಿಯೋ ಮುಖಾಮುಖಿ ಡಿಕ್ಕಿ, ಮೂವರು ಯುವಕರು ಸಾವು - undefined
ಬೈಕ್ ಹಾಗೂ ಸ್ಕಾರ್ಪಿಯೋ ಕಾರು ಮುಖಾಮುಖಿ ಡಿಕ್ಕಿ. ಒಂದೇ ಗ್ರಾಮದ ಮೂವರು ಯುವಕರು ಸ್ಥಳದಲ್ಲಿಯೇ ಸಾವು.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಇಬ್ಜಾಲ ಗ್ರಾಮದ ಪ್ರಕಾಶ್(28), ಸೋಮೇಶ್(27), ಮಹದೇವಸ್ವಾಮಿ (30) ಸ್ಥಳದಲ್ಲಿಯೇ ಮೃತಪಟ್ಟವರು. ಒಂದೇ ಗ್ರಾಮದ ಈ ಮೂವರು ಯುವಕರು ಮದುವೆ ಹಾಗೂ ಇನ್ನಿತರ ಶುಭಾ ಸಮಾರಂಭಗಳಿಗೆ ಅಡುಗೆ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದರು.
ಎಂದಿನಂತೆ ಪಿರಿಯಾಪಟ್ಟನದಲ್ಲಿ ಅಡಿಗೆ ಕೆಲಸ ನಿರ್ವಹಿಸುವ ಅಡಿಗೆ ಕಂಟ್ರಾಕ್ಟರ್ ಒಬ್ಬರ ಮುಖಾಂತರ ಅಡಿಗೆ ಕೆಲಸಕ್ಕಾಗಿ ಇಬ್ಜಾಲ ಗ್ರಾಮದಿಂದ ಟಿವಿಎಸ್ ಬೈಕಿನಲ್ಲಿ ಪಿರಿಯಾಪಟ್ಟಣಕ್ಕೆ ಬರುತ್ತಿದ್ದಾಗ, ಕುಶಾಲನಗರದಿಂದ ಮೈಸೂರಿಗೆ ತೆರಳುತ್ತಿದ್ದ ಸ್ಕಾರ್ಪಿಯೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.