ಮೈಸೂರು:ಡಿಎಫ್‌ಆರ್‌ಎಲ್ (ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ) ನೂತನ ತಂತ್ರಜ್ಞಾನದ 3 ವಾಣಿಜ್ಯ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮ ಇಂದು ಮೈಸೂರಿನಲ್ಲಿ ನಡೆಯಿತು. ವಾಣಿಜ್ಯ ಉದ್ದೇಶಕ್ಕಾಗಿ ತನ್ನ ತಂತ್ರಜ್ಞಾನದಲ್ಲಿ ಸುಲಭವಾಗಿ ಮಣ್ಣಿನಲ್ಲಿ ಕರಗುವ ತಂತ್ರಜ್ಞಾನ, ಗ್ರೀನ್ ಟೆಕ್, ಮಿಲ್ಕ್ ಟೆಸ್ಟ್ ಕಿಟ್ ತಂತ್ರಜ್ಞಾನವನ್ನು ಈ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಯಿತು. ಖಾಸಗಿ ಸ್ಟಾರ್ ಹೋಟೆಲ್ನಲ್ಲಿ ಡಿಎಫ್‌ಆರ್‌ಎಲ್, ಡಿಆರ್‌ಡಿಓ, ರಕ್ಷಣಾ ಸಚಿವಾಲಯ ಭಾರತ ಸರ್ಕಾರದ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು.
ವಿವಿಧ ಭೂ ಪ್ರದೇಶದಲ್ಲಿ ರಕ್ಷಣಾ ಪಡೆಗಳ ಸುಸ್ಥಿರತೆಗಾಗಿ ಭವಿಷ್ಯದ ಕಾರ್ಯತಂತ್ರಗಳ ಕುರಿತು 3 ದಿನಗಳ ಕಾಲ ರಾಷ್ಟ್ರೀಯ ಸಮ್ಮೇಳನ ಅಯೋಜನೆ ಮಾಡಲಾಗಿದೆ. ಸಮ್ಮೇಳನದಲ್ಲಿ ಆಹಾರ ವಿಜ್ಞಾನಿಗಳು, ಸೇನೆಯ ಹಿರಿಯ ಅಧಿಕಾರಿಗಳು, ಆಹಾರೋದ್ಯಮಿಗಳು ಮತ್ತು ಶಿಕ್ಷಣ ತಜ್ಞರನ್ನು ಒಟ್ಟಿಗೆ ಸೇರಿಸಲಾಗಿದೆ. ಭೂ ಸೇನೆ, ವಾಯು ಸೇನೆ, ನೌಕಾ ದಳ ಮತ್ತು ಸಶಸ್ತ್ರ ಸೇನೆಯ ಅನುಭವಗಳನ್ನು ಹಾಗೂ ಅವು ಎದುರಿಸುತ್ತಿರುವ ಸವಾಲುಗಳನ್ನು ಕೂಲಂಕಷವಾಗಿ ಚರ್ಚಿಸಿ, ಆಧುನಿಕ ತಂತ್ರಜ್ಞಾನದ ಮೂಲಕ ಪರಿಹರಿಸುವ ಪ್ರಯತ್ನ ಈ ಸಮ್ಮೇಳನದ ಉದ್ದೇಶವಾಗಿದೆ.