ಮೈಸೂರು:ಅನುಮಾನಸ್ಪದವಾಗಿ ಮೂರು ಚಿರತೆಗಳು ಸಾವನಪ್ಪಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಅಲ್ಲೆರೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮೂರು ಚಿರತೆಗಳು ಅನುಮಾನಾಸ್ಪದ ಸಾವು...! - mysorelepordnews
ಅನುಮಾನಸ್ಪದವಾಗಿ ಮೂರು ಚಿರತೆಗಳು ಸಾವನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಲ್ಲೆರೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಅಲ್ಲೆರೆ ಗ್ರಾಮದ ಹೊರವಲಯದ ಚೆನ್ನಬಸಪ್ಪ ಎಂಬುವರ ಜಮೀನಿನಲ್ಲಿ ಒಂದು ಹೆಣ್ಣು ಚಿರತೆ ಹಾಗೂ ಅದರ ಎರಡು ಮರಿ ಚಿರತೆಗಳು ಅನುಮಾನಸ್ಪದವಾಗಿ ಸಾವನಪ್ಪಿವೆ. ಇನ್ನು ವಿಚಾರ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಅವುಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಇದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ಅರಣ್ಯ ಪ್ರದೇಶವಾಗಿದ್ದು, ಈ ಮೂರು ಚಿರತೆಗಳು ಹೇಗೆ ಸಾವನಪ್ಪಿವೆ ಎಂಬುದನ್ನು ತನಿಖೆ ಮಾಡಲು ಅರಣ್ಯ ಇಲಾಖೆಯ ಉಪ ಅರಣ್ಯಾಧಿಕಾರಿಗಳ ತಂಡ ನೇಮಿಸಲಾಗಿದೆ. ಇವುಗಳ ಸಾವಿಗೆ ಕಾರಣ ಏನು ಪತ್ತೆ ಹಚ್ಚುತ್ತೇವೆ. ಒಂದು ವೇಳೆ ಏನಾದರೂ ಅಕ್ರಮ ಕೃತ್ಯಗಳು ನಡೆದಿದ್ದರೆ ಅವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಫ್ ಅಲೆಕ್ಸಾಂಡರ್ ತಿಳಿಸಿದ್ದಾರೆ.