ಮೈಸೂರು:ವಿದ್ಯುತ್ ತಂತಿ ತಗುಲಿ ಮೂವರು ರೈತರು ದಾರುಣವಾಗಿ ಸಾವಿಗೀಡಾದ ಘಟನೆ ಜಿಲ್ಲೆಯ ತಿ.ನರಸೀಪುರ ತಾಲೂಕಿನ ನಿಲಸೋಗೆ ಗ್ರಾಮದ ಬಳಿ ನಡೆದಿದೆ. ಗ್ರಾಮದ ನಿವಾಸಿಗಳಾದ ರಾಚೇಗೌಡ (60), ಹರೀಶ್ (33) ಹಾಗು ಮಹದೇವಸ್ವಾಮಿ (38) ಮೃತರು.
ಮುಂಜಾನೆ ಭತ್ತದ ಗದ್ದೆಗೆ ಗೊಬ್ಬರ ಹಾಕಲು ಬಂದಾಗ ರಾಚೇಗೌಡ ತಮ್ಮ ಜಮೀನಿನಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಒದ್ದಾಡುತ್ತಿದ್ದರು. ಇದನ್ನು ನೋಡಿದ ಅವರ ಪುತ್ರ ತಕ್ಷಣ ಮಹದೇವಸ್ವಾಮಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಮಹದೇವಸ್ವಾಮಿಯ ಪ್ರಾಣ ಉಳಿಸಲು ಹರೀಶ್ ಹೋಗಿದ್ದಾರೆ. ಹೀಗೆ ಮೂವರು ಸ್ಥಳದಲ್ಲಿಯೇ ಮೃತಪಟ್ಟರು.