ಮೈಸೂರು: ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ಬರುತ್ತಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, 3 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ಮೈಸೂರು ರಸ್ತೆಯ ದಂಡಿಮಾರಮ್ಮ ದೇವಸ್ಥಾನದ ಬಳಿ ಕಳೆದ ರಾತ್ರಿ ನಡೆದಿದೆ.
ಮೈಸೂರಿನಲ್ಲಿ ಕಾರು - ಬೈಕ್ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸಾವು - ವಾಹನ ಅಪಘಾತ
08:48 December 11
ಬೆಂಗಳೂರು-ಮೈಸೂರು ರಸ್ತೆಯ ದಂಡಿಮಾರಮ್ಮ ದೇವಸ್ಥಾನದ ಸಮೀಪ ಕಳೆದ ರಾತ್ರಿ ವೇಗವಾಗಿ ಬಂದ ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಕಾರ್ನ ರಭಸಕ್ಕೆ ಬೈಕ್ನಲ್ಲಿದ್ದ ರಮೇಶ್, ಪತ್ನಿ ಉಷಾ, ಪುತ್ರಿ ಮೋನಿಷಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ರ ಸಿದ್ಧಾರ್ಥ್ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು-ಮೈಸೂರು ರಸ್ತೆಯ ದಂಡಿಮಾರಮ್ಮ ದೇವಸ್ಥಾನದ ಸಮೀಪ ಕಳೆದ ರಾತ್ರಿ ಸಿದ್ದಲಿಂಗಪುರದ ಕಡೆಯಿಂದ ಮೈಸೂರಿಗೆ ಒಂದೇ ಕುಟುಂಬದ 4 ಜನ ಬೈಕ್ನಲ್ಲಿ ಬರುತ್ತಿದ್ದರು. ಮೈಸೂರಿನಿಂದ ಶ್ರೀರಂಗಪಟ್ಟಣದ ಕಡೆ ವೇಗವಾಗಿ ಹೋಗುತ್ತಿದ್ದ ಕಾರೊಂದು ರಸ್ತೆ ವಿಭಜಕವನ್ನು ದಾಟಿ ಬೈಕ್ಗೆ ಡಿಕ್ಕಿ ಹೊಡೆದಿದೆ.
ಈ ಸುದ್ದಿಯನ್ನೂ ಓದಿ:ತೀರ್ಥಹಳ್ಳಿ ಬಳಿ ಕ್ಯಾಂಟರ್ ಪಲ್ಟಿಯಾಗಿ 10 ಜಾನುವಾರುಗಳ ಸಾವು
ಕಾರ್ನ ರಭಸಕ್ಕೆ ಬೈಕ್ನಲ್ಲಿದ್ದ ರಮೇಶ್ (41), ಪತ್ನಿ ಉಷಾ (34), ಪುತ್ರಿ ಮೋನಿಷಾ(5) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ರ ಸಿದ್ಧಾರ್ಥ್ (3) ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಡಿಸಿಪಿ ಗೀತಾ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದ್ದು, ಇವರು ಮೈಸೂರಿನ ಟಿ.ಕೆ. ಲೇಔಟ್ ನಿವಾಸಿಗಳಾಗಿದ್ದಾರೆ.