ಮೈಸೂರು:ಜಿಲ್ಲೆಯ ಹುಣಸೂರಿನಲ್ಲಿ ಪ್ರತ್ಯೇಕವಾಗಿ ವಿವಿಧೆಡೆ ರಸ್ತೆ ಅಪಘಾತದಿಂದ ಮೂವರು ಮೃತಪಟ್ಟಿದ್ದಾರೆ.
ವಕೀಲ ವಿನೋದ್ ರಾಜ್ ( 43) ಸಂಪತ್ ಪವಾರ್ ( 34) ಜಯಮ್ಮ (54) ಅಪಘಾತದಲ್ಲಿ ಮೃತಪಟ್ಟವರು. ಹುಣಸೂರು ತಾಲೂಕಿನ ಆಯರಹಳ್ಳಿ ಬಳಿ ಬೈಕ್‌ನಲ್ಲಿ ಆಯ ತಪ್ಪಿ ಬಿದ್ದು ವಕೀಲ ವಿನೋದ್ ರಾಜ್ ಸಾವನ್ನಪ್ಪಿದರೆ, ಸಣ್ಣೇಗೌಡರ ಕಾಲೋನಿ ಬಳಿ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಸಂಪತ್ ಪವಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬೀಜಗನಹಳ್ಳಿ ಬಳಿ ಗೂಡ್ಸ್ ವಾಹನ ಡಿಕ್ಕಿ ಹೊಡೆದು ರೈತ ಮಹಿಳೆ ಜಯಮ್ಮ ಮೃತಪಟ್ಟಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ವಿನೋದ್ ರಾಜ್ ಅಪಘಾತದ ಪ್ರಕರಣ ದಾಖಲಾದರೆ, ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ಪ್ರತ್ಯೇಕ ಘಟನೆ: ಅಪಘಾತದಲ್ಲಿ ಮೂವರ ದುರ್ಮರಣ - women died in bike accident
ಮೈಸೂರು ಜಿಲ್ಲೆಯ ಹುಣಸೂರು ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ.
: ಅಪಘಾತದಲ್ಲಿ ಮೂವರು ಸಾವು