ಮೈಸೂರು:ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಸ್ಥಳದಲ್ಲೇ ಮೂವರು ಸಾವಿಗೀಡಾದ ಘಟನೆ ತಿ.ನರಸೀಪುರ ತಾಲೂಕಿನ ಚಿಟಗಯ್ಯನಕೊಪ್ಪಲು ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಪ್ರಕಾಶ್ (19), ಸಂತೋಷ್ (29) ಹಾಗೂ ಮರೀಜೋಗಿ(44) ಮೃತಪಟ್ಟವರು.
ಮೈಸೂರು: ಟ್ರ್ಯಾಕ್ಟರ್ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವು
ಟ್ರ್ಯಾಕ್ಟರ್ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ.
ಮೈಸೂರು: ಟ್ರ್ಯಾಕ್ಟರ್ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವು
ಜೋಳ ಒಕ್ಕಣೆ ಯಂತ್ರ ಸಾಗಾಣಿಕೆ ವೇಳೆ ಟ್ರ್ಯಾಕ್ಟರ್ ಉರುಳಿದೆ. ಯಂತ್ರ ಹಾಗೂ ಟ್ರ್ಯಾಕ್ಟರ್ನಡಿ ಸಿಲುಕಿ ಮೂವರು ಮೃತರಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಎಸ್‌ಪಿ ಆರ್ ಚೇತನ್, ಎಎಸ್ಪಿ ನಂದಿನಿ, ನರಸೀಪುರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು. ಈ ಬಗ್ಗೆ ತಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಯಲಹಂಕ ಫ್ಲೈ ಓವರ್ ಡಿವೈಡರ್ಗೆ ಗುದ್ದಿದ ಬೈಕ್.. ಇಬ್ಬರು ಸಾವು, ಓರ್ವ ಗಂಭೀರ