ಕರ್ನಾಟಕ

karnataka

ETV Bharat / state

ಸಿಎಫ್​ಟಿಆರ್​ಐನಲ್ಲಿ ಮೂರು ದಿನ ಟೆಕ್ ಭಾರತ್​​​ ಸೆಮಿನಾರ್ - ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಸಿಎಫ್​ಟಿಆರ್​ಐನ ನಿರ್ದೇಶಕಿ ಡಾ ಶ್ರೀದೇವಿ ಅನ್ನಪೂರ್ಣ ಸಿಂಗ್

ಇದೇ ತಿಂಗಳ 19, 20, ಹಾಗೂ 21 ರಂದು ಮೂರು ದಿನಗಳ ಕಾಲ ಸಿಎಫ್​ಟಿಆರ್​ಐ ಲಘು ಉದ್ಯೋಗ ಭಾರತಿ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಟೆಕ್ ಭಾರತ್ ಹೆಸರಿನ ಟೆಕ್ನಿಕಲ್ ಸೆಮಿನಾರ್ ಹಾಗೂ ಎಗ್ಸಿಬಿಷನ್ ನಡೆಯಲಿದೆ.

ಸಿಎಫ್​ಟಿಆರ್​ಐನ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್
ಸಿಎಫ್​ಟಿಆರ್​ಐನ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್

By

Published : May 17, 2022, 3:58 PM IST

Updated : May 17, 2022, 4:19 PM IST

ಮೈಸೂರು: ಸಿಎಫ್​ಟಿಆರ್​ಐ ನಲ್ಲಿ ಮೂರು ದಿನ ಅಗ್ರಿಕಲ್ಚರ್ ಮತ್ತು ಫುಡ್ ಪ್ರೊಸೆಸ್​ಗೆ ಸಂಬಂಧಿಸಿದಂತೆ ಹಾಗೂ ನೂತನ ಅವಿಷ್ಕಾರಗಳ ಬಗ್ಗೆ ಟೆಕ್ ಭಾರತ್ ಕಾರ್ಯಕ್ರಮ ನಡೆಯಲಿದೆ. ಇದರ ಪ್ರಾಮುಖ್ಯತೆ ಮತ್ತು ಈ ಕಾರ್ಯಕ್ರಮದಲ್ಲಿ ಏನೆಲ್ಲಾ ಆವಿಷ್ಕಾರಗಳ ಬಗ್ಗೆ ತಿಳಿಸಲಾಗುವುದು ಎಂಬುದರ ಬಗ್ಗೆ ಸಿಎಫ್​ಟಿಆರ್​ಐನ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ಈ ಟಿವಿ ಭಾರತಕ್ಕೆ ವಿವರಿಸಿದ್ದಾರೆ.

ಮೈಸೂರಿನ ಸಿಎಫ್​ಟಿಆರ್​ಐನಲ್ಲಿ ಇದೇ ತಿಂಗಳ 19, 20, ಹಾಗೂ 21 ರಂದು ಮೂರು ದಿನಗಳ ಕಾಲ ಸಿಎಫ್​ಟಿಆರ್​ಐ ಲಘು ಉದ್ಯೋಗ ಭಾರತಿ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಟೆಕ್ ಭಾರತ್ ಹೆಸರಿನ ಟೆಕ್ನಿಕಲ್ ಸೆಮಿನಾರ್ ಹಾಗೂ ಎಗ್ಸಿಬಿಷನ್ ನಡೆಯಲಿದೆ.

ಸಿಎಫ್​ಟಿಆರ್​ಐನ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್

ಕಾರ್ಯಕ್ರಮದ ಮೊದಲ ದಿನ ಕೃಷಿಗೆ ಸಂಬಂಧಿಸಿದ ಪ್ಯಾನಲ್ ಶೇಷನ್ ನಡೆಯಲಿದ್ದು, ಎರಡನೇ ದಿನ ವುಮೆನ್ ಇನ್ ಅಗ್ರಿಟೆಕ್ ಎಂಬ ಕಾರ್ಯಕ್ರಮ ಹಾಗೂ ಸ್ಕಿಲ್ ಡೆವಲಪ್ಮೆಂಟ್ ಕುರಿತಂತೆ ಕಾರ್ಯಕ್ರಮಗಳು ಇರುತ್ತವೆ. ಮೂರನೇ ದಿನ ಅಕ್ಕಿಯ ತಳಿಗಳು, ಅಕ್ಕಿಯಿಂದ ಏನೆಲ್ಲಾ ತಯಾರಿಸಬಹುದು ಎಂಬುದರ ಕುರಿತಂತೆ ಸೆಮಿನಾರ್ ನಡೆಯಲಿದೆ. ಇದರಲ್ಲಿ ತಜ್ಞರು, ವಿಜ್ಞಾನಿಗಳು, ಕೈಗಾರಿಕೋದ್ಯಮಿಗಳು ಹಾಗೂ ರೈತರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ಬಂದೂಕು ತರಬೇತಿ ಸಮರ್ಥಿಸಿಕೊಂಡ ಕೆ ಜಿ ಬೋಪಯ್ಯ

ಅಗ್ರಿಕಲ್ಚರ್ ಹಾಗೂ ಫುಡ್ ಪ್ರೊಸೆಸ್​​​ಗೆ ಸಂಬಂಧಿಸಿದಂತೆ ಡ್ರೋನ್ ಡೆಮಾನ್ಸ್ಟ್ರೇಷನ್ ಕೂಡ ನಡೆಯಲಿದೆ. ಇದು ರೈತರು ತ್ಯಾಜ್ಯವನ್ನ ಹೊರತುಪಡಿಸಿ ಅತಿ ಹೆಚ್ಚು ಇಳುವರಿ ಪಡೆಯಲು ಸಹಾಯ ಮಾಡುತ್ತದೆ. ಟೆಕ್ ಭಾರತ್ ಆಯೋಜಿಸಿರುವ ಈ ಕಾರ್ಯಕ್ರಮವನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಕೈಲಾಶ್ ಚೌಧರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Last Updated : May 17, 2022, 4:19 PM IST

For All Latest Updates

TAGGED:

ABOUT THE AUTHOR

...view details