ಮೈಸೂರು:ಇನ್ಸ್ಟಾಗ್ರಾಮ್ನಲ್ಲಿ ನಿಂದಿಸಿದ ಗೆಳೆಯನನ್ನು ಹಾಡಹಗಲೇ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ. ಹುಣಸೂರು ಪಟ್ಟಣದಲ್ಲಿ ಜುಲೈ 12 ರಂದು ಬೀರೇಶ್ ಎಂಬ ಯುವಕನ್ನು ಆತನ ಸ್ನೇಹಿತರಾದ ನಿತಿನ್ (23 ವರ್ಷ), ಮನೋಜ್ ಕುಮಾರ್(24 ವರ್ಷ), ಪೋತರಾಜ್ (25 ವರ್ಷ) ಇವರು ಸೇರಿಕೊಂಡು ಕೃತ್ಯ ಎಸಗಿದ್ದರು.
ಸ್ಕೂಟರ್ನಲ್ಲಿ ಬಂದ ಆರೋಪಿಗಳು ಬೀರೇಶ್ನನ್ನು ಮಾತನಾಡಿಸುವ ನೆಪದಲ್ಲಿ ಆತನ ಹತ್ತಿರ ಹೋಗಿ ಎಪಿಎಂಸಿ ಮಾರುಕಟ್ಟೆಯ ಹತ್ತಿರ ಚಾಕುವಿನಿಂದ ಬೆನ್ನಿಗೆ ಚೂರಿ ಇರಿದು ನಾಪತ್ತೆಯಾಗಿದ್ದರು. ಗಾಯಗೊಂಡಿದ್ದ ಬೀರೇಶ್ನನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ.