ಮೈಸೂರು: ಬಹಳಷ್ಟು ಜನರ ಒತ್ತಾಯದ ಕಾರಣದಿಂದ ಚಾಮುಂಡಿ ಬೆಟ್ಟಕ್ಕೆ ಹೈಟೆಕ್ ರೋಪ್ವೇ ನಿರ್ಮಾಣ ಮಾಡಲು ಚಿಂತನೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಹಳ ಜನರ ಒತ್ತಾಯದಂತೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿ ಬೆಟ್ಟಕ್ಕೆ ಹೈಟೆಕ್ ತಂತ್ರಜ್ಞಾನದ ರೋಪ್ವೇ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ಈ ರೋಪ್ವೇ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವ ಪರಿಸರವಾದಿಗಳ ಮನವೊಲಿಸಿ ಯೋಜನೆ ಜಾರಿಗೆ ತರಲಾಗುವುದು ಎಂದರು.
ಚಾಮುಂಡಿ ಬೆಟ್ಟಕ್ಕೆ ಹೈಟೆಕ್ ರೋಪ್ ವೇ ನಿರ್ಮಿಸಲು ಚಿಂತನೆ ಇನ್ನೂ ಸಾಂಸ್ಕೃತಿಕ ನಗರಿ ಪ್ರವಾಸಿಗರ ಸ್ವರ್ಗ, ಈ ನಗರದ ಗತವೈಭವವನ್ನು ನವೀನ ರೂಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುವಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು. ಇನ್ನು 3 ತಿಂಗಳಲ್ಲಿ ಹೆಲಿ ಟೂರಿಸಂ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
ಇದಕ್ಕಾಗಿ ಲಲಿತ ಮಹಲ್ ಹೋಟೆಲ್ ಬಳಿ ಹೆಲಿಕಾಪ್ಟರ್ ಟರ್ಮಿನಲ್ ಸಿದ್ಧಗೊಳಿಸಲಾಗುವುದು. ವಸ್ತು ಪ್ರದರ್ಶನ ಸ್ಥಳದಲ್ಲಿ ವರ್ಷವಿಡೀ ವಸ್ತು ಪ್ರದರ್ಶನಗಳನ್ನು ಏರ್ಪಡಿಸಲು 165 ಕೋಟಿ ರೂ. ವೆಚ್ಚದಲ್ಲಿ ನೀಲನಕ್ಷೆ ತಯಾರಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಸಾಂಸ್ಕೃತಿಕ ನಗರಿಯಲ್ಲಿ ಡಬಲ್ ಡೆಕ್ಕರ್ ಅಂಬಾರಿ ದರ್ಬಾರ್ ಅರಂಭ..!