ಕರ್ನಾಟಕ

karnataka

ETV Bharat / state

ಈ ಬಾರಿ ಸಾಂಪ್ರದಾಯಿಕ ದಸರಾ ಆಚರಣೆ : ಸಚಿವ ಮಹದೇವಪ್ಪ - mysore dasara celebration

ಐತಿಹಾಸಿಕ ಮೈಸೂರು ದಸರಾಗೆ ಭರದ ಸಿದ್ಧತೆ ನಡೆಯುತ್ತಿದೆ. ಈ ಬಾರಿ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುವುದು ಎಂದು ಸಚಿವ ಹೆಚ್​​ ಸಿ ಮಹದೇವಪ್ಪ ಹೇಳಿದ್ದಾರೆ.

this-time-traditional-will-be-dasara-celebrated-says-minister-hc-mahadevappa
ಈ ಬಾರಿ ಸಾಂಪ್ರದಾಯಿಕ ದಸರಾ ಆಚರಣೆ : ಸಚಿವ ಮಹದೇವಪ್ಪ

By ETV Bharat Karnataka Team

Published : Sep 23, 2023, 10:50 PM IST

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ವೇಳೆ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮವು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಇರಬೇಕು. ಈ ಬಾರಿ ಅದ್ಧೂರಿಯಲ್ಲದ ಹಾಗೂ ಸರಳವೂ ಅಲ್ಲದ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್​ ಸಿ ಮಹದೇವಪ್ಪ ಹೇಳಿದರು.

ಇಂದು ಅರಮನೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಆಚರಣೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಪರಂಪರೆಯನ್ನು ಬಿಂಬಿಸುವ ರೀತಿ ಇರಬೇಕು. ಕವಿಗೋಷ್ಠಿಗಳು ಸಂವಿಧಾನ, ಗಣರಾಜ್ಯ, ಕರ್ನಾಟಕ ಏಕೀಕರಣ, ಮೈಸೂರು ಅರಸರ ಬಗ್ಗೆ ಮಾಹಿತಿ ನೀಡುವ ರೀತಿ ಇರಬೇಕು. ಆಹಾರ ಮೇಳದಲ್ಲಿ ದೇಶೀಯ ಆಹಾರ ಪದ್ಧತಿಯ ಆಹಾರಗಳನ್ನು ನೀಡಬೇಕು. ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪ್ಲಾಸ್ಟಿಕ್ ಮುಕ್ತ ದಸರಾ ಆಚರಣೆ ಮಾಡಬೇಕು. ದಸರಾ ಚಲನಚಿತ್ರೋತ್ಸವದಲ್ಲಿ ಸಾಮಾಜಿಕ ಸಂದೇಶ ಸಾರುವ ಚಿತ್ರಗಳನ್ನು ಪ್ರದರ್ಶನ ಮಾಡಬೇಕು. ಯುವ ನಿರ್ದೇಶಕರಿಗೆ ಉತ್ತೇಜನ ನೀಡುವಂತೆ ಇರಬೇಕು. ಕಿರು ಚಿತ್ರಗಳ ಸ್ಪರ್ಧೆ ಏರ್ಪಡಿಸಬೇಕು ಎಂದು ತಿಳಿಸಿದರು.

ಇಲ್ಲಿ ಆಯೋಜಿಸಲ್ಪಡುವ ಫಲಪುಷ್ಪ ಪ್ರದರ್ಶನಗಳ ಅತ್ಯಂತ ಆಕರ್ಷಣೀಯವಾಗಿ ಇರಬೇಕು. ಹಣ್ಣಿನ ಮೇಳದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಬೆಳೆಯುವ ಹಣ್ಣುಗಳ ಪ್ರದರ್ಶನ ಆಗಬೇಕು. ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ, ದಸರಾಗೆ ವಿವಿಧ ಜಿಲ್ಲೆಗಳಿಂದ ಸ್ತಬ್ಧ ಚಿತ್ರಗಳು ಬರಲಿವೆ. ದಸರಾ ಆಚರಣೆಯ ಮೊದಲ ದಿನವೇ ಎಲ್ಲಾ ಸ್ಟಾಲ್​ಗಳನ್ನು ತೆರೆಯಬೇಕು. ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿ ಇರಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಗಾಯತ್ರಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಬಿ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಶಿವರಾಜ್, ದಸರಾ ಉಪಸಮಿತಿಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಐತಿಹಾಸಿಕ ಮೈಸೂರು ದಸರಾವನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ದಸರಾ ಸಂದರ್ಭದಲ್ಲಿ ನಡೆಯುವ ಜಂಬೂ ಸವಾರಿಯನ್ನು ನೋಡಲು ಜನರು ಮುಗಿಬೀಳುತ್ತಾರೆ. ಜಿಲ್ಲಾಡಳಿತ ದಸರಾಗೆ ಭರ್ಜರಿ ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ :ಮೈಸೂರು ದಸರಾ -2023.. ಅಂಬಾರಿ ಹೊರುವ ಆನೆಗೆ ಸಿದ್ಧವಾಗುತ್ತಿದೆ ನಮ್ದಾ

ABOUT THE AUTHOR

...view details