ಕರ್ನಾಟಕ

karnataka

ETV Bharat / state

ಇದು ರೈತ ಪರ ಬಜೆಟ್ ಅಲ್ಲ, ಉದ್ಯಮಿಗಳ ಬಜೆಟ್ : ಕುರುಬೂರು ಶಾಂತಕುಮಾರ್ - ರಾಜ್ಯಕ್ಕೂ ಬಜೆಟ್​‌ನಲ್ಲಿ ಅನ್ಯಾಯವಾಗಿದೆ ಎಂದ ಕುರುಬೂರು ಶಾಂತಕುಮಾರ್

ಕೇಂದ್ರ ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಡುತ್ತೀವಿ ಎಂದು ಅಧಿಕಾರಕ್ಕೆ ಬಂತು. ಆದ್ರೆ, ಇದುವರೆಗೂ ಏನನ್ನು ಮಾಡಿಲ್ಲ. ಇಂದಿನ ಬಜೆಟ್ ಕೃಷಿಕರ ಬಜೆಟ್ ಅಲ್ಲ, ಇದು ಉದ್ಯಮಿಗಳ ಬಜೆಟ್​ ಎಂದು ​​ಕುರುಬೂರು ಶಾಂತಕುಮಾರ್ ಹೇಳಿದ್ದಾರೆ..

Kuruburu Shantakumar
ಕುರುಬೂರು ಶಾಂತಕುಮಾರ್

By

Published : Feb 1, 2022, 3:52 PM IST

ಮೈಸೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಕೃಷಿಕರ ಬಜೆಟ್ ಅಲ್ಲ, ಉದ್ಯಮಿಗಳ ಬಜೆಟ್ ಎಂದು ಹೇಳುವ ಮೂಲಕ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್‌ ಕುರಿತಂತೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರತಿಕ್ರಿಯೆ ನೀಡಿರುವುದು..

ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಡುತ್ತೀವಿ ಎಂದು ಅಧಿಕಾರಕ್ಕೆ ಬಂತು. ಆದರೆ, ಅನುಕೂಲ ಮಾಡಿಕೊಟ್ಟಿಲ್ಲ. ಈ ಬಾರಿಯೂ ಬಜೆಟ್​​ನಲ್ಲಿ ರೈತರಿಗೆ ವಂಚನೆ ಮಾಡಲಾಗಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ:ಆರ್ಥಿಕ ಪ್ರಗತಿಯ ಗುರಿಯಿಲ್ಲದ, ಆರೋಗ್ಯ, ಆಹಾರ ಭದ್ರತೆ ಬಗ್ಗೆ ಕಿಂಚಿತ್ತೂ ಕಾಳಜಿ ಇರದ ನಿರರ್ಥಕ ಬಜೆಟ್ : ಟಿ ಎ ಶರವಣ

ವಿವಾದಿತ ಕೃಷಿ ಕಾಯ್ದೆ ವಾಪಸ್ ಪಡೆಯುವಂತೆ ರೈತರು ನಿರಂತರ ಹೋರಾಟ ಮಾಡಿದ ಫಲವಾಗಿ, 700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆದರೆ, ಇವರಿಗೆ ಪರಿಹಾರ ಘೋಷಣೆ ಮಾಡಿಲ್ಲ.

ದೇಶ ಹಾಗೂ ರಾಜ್ಯದ ರೈತರಿಗೆ ಬಜೆಟ್​​ನಿಂದ ಅನುಕೂಲ ಆಗಿಲ್ಲವೆಂದು ಟೀಕಿಸಿದರು. ರಾಜ್ಯಕ್ಕೂ ಬಜೆಟ್​‌ನಲ್ಲಿ ಅನ್ಯಾಯವಾಗಿದೆ. ಆದರೆ, ರಾಜ್ಯದಿಂದ ಆಯ್ಕೆಯಾದ ಸಂಸದರು ಅದನ್ನು ಪ್ರಶ್ನೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details