ಮೈಸೂರು: ದೇವಸ್ಥಾನದ ಬಾಗಿಲು ಮುರಿದು ಹುಂಡಿ ಹಣ ದೋಚಿಕೊಂಡು ಕಳ್ಳರು ಪರಾರಿಯಾಗಿರುವ ಘಟನೆ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮಾಸ್ಕ್ ಧರಿಸಿ ದೇವಾಲಯದ ಹುಂಡಿ ಹಣ ಕದ್ದು ಖದೀಮರು ಪರಾರಿ - ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಶ್ರೀ ರಾಮ ದೇವಸ್ಥಾನ ಕಳ್ಳತನ
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ಕಳ್ಳರು ಕಳೆದ ರಾತ್ರಿ ದೇವಾಲಯದ ಎರಡು ಬಾಗಿಲಿನ ಬೀಗ ಮುರಿದು ಹುಂಡಿ ಹಣ ಕದ್ದು ಪರಾರಿಯಾಗಿದ್ದಾರೆ.
ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ಕಳ್ಳರು ಕಳೆದ ರಾತ್ರಿ ದೇವಾಲಯದ ಎರಡು ಬಾಗಿಲಿನ ಬೀಗ ಮುರಿದು ಹುಂಡಿ ಹಣ ಕದ್ದಿದ್ದಾರೆ. ದೇವಾಲಯದ ಹೊರಗೆ ಕಾವಲುಗಾರರು ಮಲಗಿದ್ದರೂ ಅವರಿಗೆ ಗೊತ್ತಾಗದಂತೆ ಕಳ್ಳತನ ಮಾಡಿದ್ದು, ಗರ್ಭಗುಡಿಯ ಬೀಗ ಮುರಿಯಲು ಸಹ ಯತ್ನಿಸಿದ್ದಾರೆ.
ದೇವಾಲಯದಲ್ಲಿದ್ದ ಸಿಸಿಟಿವಿ ಕ್ಯಾಮರಾ ಕಿತ್ತು ಹಾಕಿದ್ದು, 3ರಿಂದ 5 ಮಂದಿ ಈ ತಂಡದಲ್ಲಿದ್ದರು. ಜೊತೆಗೆ ಎಲ್ಲರೂ ಮಾಸ್ಕ್ ಧರಿಸಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 4 ವರ್ಷಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಸ್ಥಳಕ್ಕೆ ಕೆ.ಆರ್. ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.