ಮೈಸೂರು: ಚಾಲಕನನ್ನು ಬೆದರಿಸಿ ಓಲಾ ಕಂಪನಿಗೆ ಸೇರಿದ ಕಾರನ್ನೇ ಕದ್ದೊಯ್ದಿರುವ ಸಿನಿಮಾ ಸ್ಟೈಲ್ ಪ್ರಕರಣ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಖಾಸಗಿ ಹೋಟೆಲ್ ಬಳಿ ಓಲಾ ಕಂಪನಿಗೆ ಬಾಡಿಗೆ ಹೋಗುತ್ತಿದ್ದ ಇಲವಾಲದ ಹರೀಶ್ ಎಂಬುವರ ಸ್ವಿಫ್ಟ್ ಕಾರನ್ನು ಬಾಡಿಗೆಗೆ ತೆಗೆದುಕೊಂಡು ಹೋಗುವ ನೆಪದಲ್ಲಿ ದರೋಡೆ ಮಾಡಲಾಗಿದೆ. ಖದೀಮನೋರ್ವ ಸೊಪ್ಪು ಮಾರುವ ವೃದ್ಧೆಯ ಬಳಿ ಮೊಬೈಲ್ ಪಡೆದು ಕರೆ ಮಾಡಿ ಕಾರನ್ನು ಬುಕ್ ಮಾಡಿದ್ದಾನೆ. ಕಾರು ಇನ್ಫೋಸಿಸ್ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಹೋಗುವಾಗ ಬಾಡಿಗೆ ಪಡೆದಿದ್ದ ವ್ಯಕ್ತಿ ಚಾಲಕನಿಗೆ ಚಾಕು ತೋರಿಸಿ ಬೆದರಿಸಿ ಕಾರನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಜಿಪಿಎಸ್ ಅನ್ನು ಮಂಡ್ಯ ಜಿಲ್ಲೆಯ ಶಿವಳ್ಳಿ ಬಳಿ ಸಂಪರ್ಕವನ್ನು ಕಿತ್ತಾಕಿದ್ದಾನೆ.