ಮೈಸೂರು:ಮಾಜಿ ಸಿಎಂಗಳಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ನಡುವೆ ನಡೆದಿರುವ ಘಟನೆಗಳ ಬಗ್ಗೆ ಅವರವರಿಗೆ ಮಾತ್ರ ಸತ್ಯಗೊತ್ತು ಎಂದು ಇಬ್ಬರ ಹೇಳಿಕೆಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಕುಟುಕಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಹಿನ್ನೆಲೆ ಅವರ ಪ್ರತಿಮೆಗೆ ಮಾರ್ಲಾಪಣೆ ಮಾಡಿದ್ರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದೆ. ನಾನು ಬಂದ ನಂತರ ಸಿದ್ದರಾಮಯ್ಯ ಅವರು ಕಾಂಗ್ರೆಸ್ಗೆ ಬಂದಿದ್ದು. ಸಿದ್ದರಾಮಯ್ಯ ಟೀಮ್ ಅಲ್ಲ. ನಾನೊಬ್ಬ ಮುಗ್ಧ ಅಮಾಯಕ, ನಾನೀಗ ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿದ್ದೀನಿ ಎಂದರು.