ಮೈಸೂರು : ಜೆಡಿಎಸ್ ಸಭೆಯಲ್ಲಿ ಗದ್ದಲವೂ ಇಲ್ಲ, ಏನೂ ಇಲ್ಲ. ಕಾರ್ಯಕರ್ತರ ಮತ್ತು ಲೀಡರ್‌ಗಳ ಮನಸ್ಸುಗಳು ಒಂದಾಗಬೇಕಷ್ಟೇ ಅಂತಾ ಸಚಿವ ಸಾ.ರಾ. ಮಹೇಶ್ ಈಟಿವಿ ಭಾರತ್‌ಗೆ ಸ್ಪಷ್ಟನೆ ನೀಡಿದ್ದಾರೆ.
ಗದ್ದಲ ಏನೂ ಇಲ್ಲ.. ಕಾರ್ಯಕರ್ತರು, ನಾಯಕರ ಮನಸ್ಸುಗಳು ಒಂದಾಗಬೇಕಷ್ಟೇ- ಸಚಿವ ಸಾ.ರಾ ಮಹೇಶ್
ಕಾರ್ಯಕರ್ತರು ಅವರಿಗಾದ ನೋವನ್ನು ವ್ಯಕ್ತಪಡಿಸಿದ್ದಾರಷ್ಟೇ.. ಯಾವುದೇ ಗದ್ದಲವಾಗಿಲ್ಲ ಎಂದು ಸಚಿವ ಸಾ.ರಾ.ಮಹೇಶ್ ಸ್ಪಷ್ಟನೆ ನೀಡಿದ್ದಾರೆ. ಇಂದು ನಡೆದ ಜೆಡಿಎಸ್ ಸಭೆಯಲ್ಲಿ ಕಾರ್ಯಕರ್ತರ ಗದ್ದಲ ನಡೆಸಿಲ್ಲ. ತಮಗಾದ ನೋವನ್ನ ಹೇಳಿಕೊಂಡಿದ್ದಾರಷ್ಟೇ ಎಂದು ಮಹೇಶ ಹೇಳಿದರು.
ಇಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಗದ್ದಲವುಂಟಾಗಿತ್ತು. ಈಬಗ್ಗೆ ಸಚಿವ ಸಾ ರಾ ಮಹೇಶ್‌ರಿಗೆ ಈಟಿವಿ ಭಾರತ್ ಸ್ಪಷ್ಟನೆ ಕೇಳಿದಾಗ, ಗದ್ದಲವೂ ಇಲ್ಲ ಏನೂ ಇಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಬಹಳ ವರ್ಷಗಳಿಂದ ಪರಸ್ಪರ ರಾಜಕೀಯ ಹೋರಾಟ ನಡೆಸಿಕೊಂಡು ಬಂದಿದ್ದರ ಪರಿಣಾಮ, ಇಂತಹ ಹೋರಾಟಗಳನ್ನು ಶಮನ ಮಾಡುವ ಕೆಲಸವನ್ನು ಜಿ.ಟಿ ದೇವೇಗೌಡರ ನೇತೃತ್ವದಲ್ಲಿ ಮಾಡುತ್ತಿದ್ದೇವೆ.
ಇಂದಿನ ಸಭೆಯಲ್ಲಿ ಕಾರ್ಯಕರ್ತರು ತಮಗಾದ ನೋವನ್ನು ಹೇಳಿಕೊಂಡಿದ್ದಾರೆ ಅಷ್ಟೇ.. ಕಾರ್ಯಕರ್ತರ ಮಾತನ್ನು ನಾಯಕರು ಕೇಳಿಸಿಕೊಂಡಿದ್ದು ಅವರಿಗಾದ ನೋವನ್ನು ಗದ್ದಲದ ರೀತಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ನಂತರ ಜಿ. ಟಿ ದೇವೇಗೌಡರ ಮಾತಿಗೆ ಒಪ್ಪಿ ಸಮಾಧಾನವಾಗಿದ್ದಾರೆ. ಇಲ್ಲಿ ಯಾರೂ ಸಹ ಬಾವುಟ ತೋರಿಸಿಲ್ಲ, ಎಲ್ಲರೂ ಶಾಂತಿಯುತವಾಗಿದ್ದಾರೆ ಎಂದರು.