ಮೈಸೂರು:ಇಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಆಗಮಿಸಿದ್ದ ಸಮನ್ವಯ ಸಮಿತಿಯ ಅಧ್ಯಕ್ಷರೂ ಆದ ಮಾಜಿ ಸಿಎಂ ಸಿದ್ದರಾಮಯ್ಯ, ಶಾರದಾದೇವಿ ನಗರದಲ್ಲಿರುವ ತಮ್ಮ ಮನೆಯ ಬಳಿ ಕಾದಿದ್ದ ಮಾಧ್ಯಮದವರಿಗೆ ಮಾತನಾಡಲು ಏನು ಇಲ್ಲ ಎಂದು ಹೇಳಿ ಹೊರಟು ಹೋದರು.
ನಿಮ್ಮೊಂದಿಗೆ ಮಾತನಾಡಲು ಏನೂ ಇಲ್ಲ: ಸಿದ್ದರಾಮಯ್ಯ - Mysore
ರಾಜ್ಯಾದಾದ್ಯಂತ ಸದ್ದು ಮಾಡುತ್ತಿರುವ ಕೆಲವು ಪ್ರಕರಣಗಳ ಬಗ್ಗೆ ಸುದ್ದಿಗಾರರು ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ನಿಮ್ಮ ಜೊತೆ ಮಾತನಾಡಲು ಏನು ಇಲ್ಲ ಎಂದು ಹೇಳಿ ಹೊರಟು ಹೋದ ಘಟನೆ ನಡೆಯಿತು.
ಮಾಜಿ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯನವರ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಹೆಚ್.ವಿಶ್ವನಾಥ್ ಇಂದು ವಾಗ್ದಾಳಿ ನಡೆಸಿದ್ದರು. ಇದಲ್ಲದೇ ಮಾಜಿ ಸಚಿವ ರೋಷನ್ ಬೇಗ್ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದು ಈ ಎಲ್ಲಾ ಪ್ರಶ್ನೆಗಳನ್ನು ಮಾಧ್ಯಮದವರು ಕೇಳುವರಿದ್ದರು. ಅದರೆ, ಮಾತನಾಡಲು ಏನು ಇಲ್ಲ ಎಂದು ಹೊರಟು ಹೋಗಿದ್ದಾರೆ. ಸಿದ್ದರಾಮಯ್ಯ ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.