ಮೈಸೂರು:ಕಳೆದ 3 ದಿನಗಳಿಂದ ಕಾಂಗ್ರೆಸ್ನ ಕೆಲ ಶಾಸಕರು ಮತ್ತು ಸಚಿವರು ನೀಡುತ್ತಿರುವ ಹೇಳಿಕೆಗಳಿಂದ ಬೇಸಗೊಂಡಿದ್ದಾರೆ ಎನ್ನಲಾಗ್ತಿರುವ ಸಿದ್ದರಾಮಯ್ಯ ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಮೂರು ದಿನಗಳಿಂದ ಮೈಸೂರು ಭಾಗದಲ್ಲೇ ಇರುವ ಸಿದ್ದರಾಮಯ್ಯ, 2 ದಿನ ಮಡಿಕೇರಿಯ ರೆಸಾರ್ಟ್ನಲ್ಲಿ ಪುತ್ರನೊಂದಿಗೆ ವಿಶ್ರಾಂತಿಯಲ್ಲಿದ್ದರು. ನಿನ್ನೆ ರಾತ್ರಿ ಟಿ.ಕಾಟೂರಿನ ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆದು ಇಂದು ಮೈಸೂರು ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ತೆರಳಿದರು. ಈ ಸಂದರ್ಭದಲ್ಲಿ ಮಾಧ್ಯಮದವರು ಅವರನ್ನು ಮಾತನಾಡಿಸಲು ಯತ್ನಿಸಿದರು. ಆಗ ಮಾತನಾಡಲು ಏನು ಇಲ್ಲ ಎನ್ನುತ್ತ ಅವರು ಏರ್ಪೋರ್ಟ್ ಒಳಗೆ ಪ್ರವೇಶಿಸಿದರು.