ಮೈಸೂರು:ಹುಣಸೂರಿನ ಬೈ ಎಲೆಕ್ಷನ್ಗೆ ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ಬದಲಿ ಹೆಸರಿಗೆ ಅನರ್ಹ ಶಾಸಕ ಎಚ್.ವಿಶ್ವನಾಥ್ ಸ್ಪಷ್ಟನೆ ನೀಡಿದ್ದಾರೆ.
ಹುಣಸೂರು ಉಪಚುನಾವಣೆಗೆ ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್ ಅವರ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಜಲದರ್ಶಿನಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್ ಅವರು, ಇದೆಲ್ಲ ಗಾಳಿ ಸುದ್ದಿಗಳು , ಸಿಟ್ಟಿಂಗ್ ಕ್ಷೇತ್ರವನ್ನು ಯಾರಾದರೂ ಬಿಟ್ಟು ಕೊಡಲು ಸಿದ್ಧರಿರುತ್ತಾರಯೇ, ಚುನಾವಣೆಗೆ ಇನ್ನು ಬಹಳ ದಿನ ಇದೆ. ಬಿಜೆಪಿ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.